Tuesday, January 7, 2025

ಚುನಾವಣೆ ಎದುರಿಸುವ ಅನುಭವವನ್ನು ನೀಡಲು ಬಂದಿದ್ದೇನೆ : ಮಮತಾ ಬ್ಯಾನರ್ಜಿ

ಗೋವಾ : ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಡಿ.13 ಸೋಮವಾರ ಗೋವಾದಲ್ಲಿ ‘ಖೇಲ್ ಜಾಟ್ಲೊ’ ಘೋಷಣೆ ಮೊಳಗಿಸುವ ಮೂಲಕ ವಿಧಾನಸಭೆ ಚುನಾವಣೆಗೆ ತಮ್ಮ ಪಕ್ಷದ ಬದ್ಧತೆಯನ್ನು ಘೋಷಿಸಿದರು.

ಭಾರತದ ರಾಜಕೀಯವು ಜಮೀನ್ದಾರಿ ಪದ್ಧತಿಯಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದರು.ಗೋವಾದಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದುಕೊಳ್ಳುವ ಯಾವುದೇ ಮತದಾರ ಟಿಎಂಸಿಯನ್ನು ಬೆಂಬಲಿಸಬೇಕು ಎಂದು ಕೋರಿದರು. ಪಕ್ಷದ ಸ್ಥಳೀಯ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ‘ಗೋವಾ ಎನ್ನುವುದು ಮುದ್ದಾಗಿರುವ ಸುಂದರ ಮತ್ತು ಬುದ್ಧಿವಂತ ರಾಜ್ಯ. ಇಲ್ಲಿ ಮುಖ್ಯಮಂತ್ರಿಯಾಗಬೇಕು ಎಂದು ನಾನು ಬಂದಿಲ್ಲ. ಚುನಾವಣೆ ಎದುರಿಸುವ ನಮ್ಮ ಅನುಭವವನ್ನು ಗೋವಾ ಜನರಿಗೆ ನೀಡಲು ಬಂದಿದ್ದೇನೆ’ ಎಂದರು.

RELATED ARTICLES

Related Articles

TRENDING ARTICLES