Friday, April 19, 2024

ಮಕ್ಕಳ ಕಳ್ಳನಾ, ಮಾನಸಿಕ ಅಸ್ವಸ್ಥನಾ?

ಬೆಂಗಳೂರು: ಬೆಂಗಳೂರಿನ ಬ್ಯಾಡರಹಳ್ಳಿಯ ಕೆಂಪೇಗೌಡ ಸರ್ಕಲ್​ನಲ್ಲಿ ಮಗುವನ್ನು ಕಳ್ಳನತ ಮಾಡಿದ ಘಟನೆಯೊಂದು ನಡೆದಿದೆ. ಆದರೆ ಈ ಘಟನೆಯ ಬಗ್ಗೆ ಸಾರ್ವಜನಿಕರು ಹೇಳುವುದೇ ಒಂದಾದರೆ, ಪೊಲೀಸರು ಹೇಳುವ ಕತೆಯೇ ಮತ್ತೊಂದು. ಅಪರಿಚಿತ ವ್ಯಕ್ತಿಯೊಬ್ಬ 4 ವರ್ಷದ ಮಗುವೊಂದನ್ನು ಹೊತ್ತೊಯ್ದಿದ್ದಾನೆ. ಆ ಮಗು ಕಟ್ಟದ ಕೆಲಸ ಮಾಡಿಕೊಂಡಿದ್ದ ಕಾರ್ಮಿಕನೊಬ್ಬನ ಮಗು. ಅಪರಿಚಿತ ವ್ಯಕ್ತಿ ಹೀಗೆ ತಮ್ಮ ಮಗುವನ್ನು ಹೆಗಲ ಮೇಲೆ ಹಾಕಿಕೊಂಡು ಹೊರಟಿರುವುದನ್ನು  ನೋಡಿ ಗಾಬರಿಯಿಂದ ಬಿಡಿಸಿಕೊಳ್ಳಲು ಬಂದಿದ್ದಾರೆ. ಆದರೆ ಆ ಅಪರಿಚಿತ ಹೀಗೆ ಬಿಡಿಸಲು ಬಂದ ತಂದೆ ಹಾಗೂ ಸಾರ್ವಜನಿಕರ ಮೇಲೆಯೆ ಹಲ್ಲೆ ಮಾಡಿದ್ದಾನೆ. ಕಡೆಗೆ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ಅವನನ್ನು ಹಿಡಿದು ಕೊಟ್ಟಿದ್ದಾರೆ. ಇದು ಘಟನೆಯನ್ನು ಸಾರ್ವಜನಿಕರು ವಿವರಿಸುವ ರೀತಿ.

ಇನ್ನು ಈ ಘಟನೆಯ ಬಗ್ಗೆ ಪೊಲೀಸರು ಹೇಳುವುದೇ ಬೇರೆ. ಅವನೊಬ್ಬ ಮಾನಸಿಕ ಅಸ್ವಸ್ಥ. ಅವನಿಗೆ ಬುದ್ದಿ ಸರಿಯಿಲ್ಲದಿರುವುದರಿಂದ ಮನೆಯೊಂದರ ಮುಂದೆ ತುಂಬ ಹೊತ್ತು ನಿಂತಿದ್ದಾನೆ. ಆಗ ಜನರು ನಮಗೆ ಕರೆ ಮಾಡಿದ್ದರಿಂದ ಬಂದು ಅವನನ್ನು ಕರೆತಂದಿದ್ದೇವೆ. ಮಗುವನ್ನು ಕಿಡ್ನಾಪ್ ಮಾಡಿಲ್ಲ ಎಂಬುದು ಪೊಲೀಸರ ವಾದ!

ಆದರೆ ಪೊಲೀಸರ ಈ ವಾದವನ್ನು ಮಗುವಿನ ತಂದೆ ಅಲ್ಲಗಳೆಯುತ್ತಾರೆ. ನಮ್ಮ ಮಗುವನ್ನು ಆತ ಕಿಡ್ನಾಪ್ ಮಾಡಿಕೊಂಡು ಹೋಗುತ್ತಿರುವುದನ್ನು ನಮ್ಮ ಸಂಬಂಧಿಯೊಬ್ಬರು ನೋಡಿ ನಮಗೆ ತಿಳಿಸಿದ್ದರಿಂದಲೇ ಅವನನ್ನು ಹಿಡಿಯಲು ಸಾಧ್ಯವಾಯಿತು. ನಮ್ಮ ಮಗು ನಮಗೆ ಸಿಕ್ಕಿತು ಎಂದು ಮಗುವಿನ ತಂದೆ ಹೇಳುತ್ತಾರೆ. ಗುರುವಾರ ಮಧ್ಯಾಹ್ನ 12ರಿಂದ 1 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಘಟನೆಯ ಬಗ್ಗೆ ಆ ಬಡಾವಣೆಯ ಜನರು ಬೆಚ್ಚಿಬಿದ್ದಿದ್ದಾರೆ. ಘಟನೆಯ ತನಿಖೆ ನಡೆದಿದೆ.

RELATED ARTICLES

Related Articles

TRENDING ARTICLES