Sunday, December 15, 2024

ಮಂತ್ರಿಮಾಲ್​ಗೆ ಬೀಗ ಜಡಿದ BBMP

ಬೆಂಗಳೂರು : ನವೆಂಬರ್ 15ರಂದು ಪಾಲಿಕೆ ಮಂತ್ರಿ ಮಾಲ್ ಕ್ಲೋಸ್ ಮಾಡಿ ನಂತರ ಡೆಡ್ ಲೈನ್ ನೀಡಲಾಗಿತ್ತು, ನಿನ್ನೆಗೆ ಪಾಲಿಕೆ ಮಂತ್ರಿ ಮಾಲ್​ಗೆ ನೀಡಿದ್ದ ಡೆಡ್​​​ಲೈನ್ ಮುಕ್ತಾಯವಾಗಿದ್ದು, ಇನ್ನೂ ಆಸ್ತಿ ತೆರಿಗೆ ಪಾವತಿಸದ ಹಿನ್ನಲೆಯಲ್ಲಿ BBMP ಜಂಟಿ ಆಯುಕ್ತ ಶಿವಸ್ವಾಮಿ ನೇತೃತ್ವದಲ್ಲಿ ಮಂತ್ರಿಮಾಲ್​ಗೆ ಇವತ್ತು ಬೀಗ ಹಾಕಲಾಗಿದೆ. ಇನ್ನು ಮಾಲ್​ಗೆ ಬೀಗ ಬಿದ್ದಿರೋದ್ರಿಂದ ಮಂತ್ರಿ ಮಾಲ್​ಗೆ ಶಾಪಿಂಗ್ ಬಂದಿದ್ದ ಶಾಪಿಂಗ್ ಪ್ರಿಯರು ವಾಪಸ್ ಹೋಗಿದ್ದಾರೆ.

ಮಲ್ಲೇಶ್ವರಂನಲ್ಲಿರೋ ಮಂತ್ರಿ ಮಾಲ್​ಗೆ ಬಿಬಿಎಂಪಿ ಬೀಗ ಹಾಕಿರೋ ವಿಚಾರಕ್ಕೆ ಸಂಬಂದಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಮಾತನಾಡಿದ್ದು, ಈಗಾಗಲೇ ಸಾಕಷ್ಟು ಬಾರಿ ಮಾಲ್​ಗೆ ಡೆಡ್​ಲೈನ್​ ನೀಡಲಾಗಿದೆ ಆದ್ರೆ, ಟ್ಯಾಕ್ಸ್ ಕಟ್ಟುವ ವಿಚಾರದಲ್ಲಿ ಮಂತ್ರಿಮಾಲ್ ನಿರ್ಲಕ್ಷ್ಯ ವಹಿಸಿದೆ ಹೀಗಾಗಿ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES