ಬೆಂಗಳೂರು : ನವೆಂಬರ್ 15ರಂದು ಪಾಲಿಕೆ ಮಂತ್ರಿ ಮಾಲ್ ಕ್ಲೋಸ್ ಮಾಡಿ ನಂತರ ಡೆಡ್ ಲೈನ್ ನೀಡಲಾಗಿತ್ತು, ನಿನ್ನೆಗೆ ಪಾಲಿಕೆ ಮಂತ್ರಿ ಮಾಲ್ಗೆ ನೀಡಿದ್ದ ಡೆಡ್ಲೈನ್ ಮುಕ್ತಾಯವಾಗಿದ್ದು, ಇನ್ನೂ ಆಸ್ತಿ ತೆರಿಗೆ ಪಾವತಿಸದ ಹಿನ್ನಲೆಯಲ್ಲಿ BBMP ಜಂಟಿ ಆಯುಕ್ತ ಶಿವಸ್ವಾಮಿ ನೇತೃತ್ವದಲ್ಲಿ ಮಂತ್ರಿಮಾಲ್ಗೆ ಇವತ್ತು ಬೀಗ ಹಾಕಲಾಗಿದೆ. ಇನ್ನು ಮಾಲ್ಗೆ ಬೀಗ ಬಿದ್ದಿರೋದ್ರಿಂದ ಮಂತ್ರಿ ಮಾಲ್ಗೆ ಶಾಪಿಂಗ್ ಬಂದಿದ್ದ ಶಾಪಿಂಗ್ ಪ್ರಿಯರು ವಾಪಸ್ ಹೋಗಿದ್ದಾರೆ.
ಮಲ್ಲೇಶ್ವರಂನಲ್ಲಿರೋ ಮಂತ್ರಿ ಮಾಲ್ಗೆ ಬಿಬಿಎಂಪಿ ಬೀಗ ಹಾಕಿರೋ ವಿಚಾರಕ್ಕೆ ಸಂಬಂದಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಮಾತನಾಡಿದ್ದು, ಈಗಾಗಲೇ ಸಾಕಷ್ಟು ಬಾರಿ ಮಾಲ್ಗೆ ಡೆಡ್ಲೈನ್ ನೀಡಲಾಗಿದೆ ಆದ್ರೆ, ಟ್ಯಾಕ್ಸ್ ಕಟ್ಟುವ ವಿಚಾರದಲ್ಲಿ ಮಂತ್ರಿಮಾಲ್ ನಿರ್ಲಕ್ಷ್ಯ ವಹಿಸಿದೆ ಹೀಗಾಗಿ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ ಎಂದಿದ್ದಾರೆ.