Wednesday, January 22, 2025

ಕೆ.ಜಿ. ಹಳ್ಳಿ ಆರೋಪಿಗಳ ವಿರುದ್ಧ ಎಫ್​​ಐಆರ್ ದಾಖಲು

ಬೆಂಗಳೂರು:  ಜಿಲ್ಲೆಯಲ್ಲಿ ನಡೆದ ಕೆ.ಜಿ ಹಳ್ಳಿ ಗಲಭೆಕೋರರ ವಿರುದ್ಧ ಇನ್ಸ್​ಪೆಕ್ಟರ್​ ಅಜಯ್ ಸಾರಥಿ ದೂರು ನೀಡಿದ್ದಾರೆ.  ಇನ್ನು ಗಲಭೆಕೋರರಲ್ಲಿ ಪ್ರಮುಖದ  ಅಬ್ಬಾಸ್A1, ಫಿರೋಜ್ A2, ಮುಜಾಮಿಲ್ A3, ಹಬೀಬ್ A4, ಪೀರ್ ಪಾಷಾ A5 ಸೇರಿದಂತೆ 17 ಜನರ ವಿರುದ್ದ ದೂರು ದಾಖಲಾಗಿಸಿದೆ. ಇನ್ನು ಬಂಧಿತ ಆರೋಪಿಗಳೆಲ್ಲರೂ ಎಸ್​ಡಿಪಿಐ ಸಂಘಟನೆಯವರು ಎಂದು ಉಲ್ಲೇಖವಾಗಿದೆ.

 ಆರೋಪಿಗಳನ್ನು ಈ ಕೆಳಗಿನ ಸೆಕ್ಷನ್ ಅಡಿಯಲ್ಲಿ ದೂರು ದಾಖಲಾಗಿಸಿದೆ.

ಐಪಿಸಿ ಸೆಕ್ಷನ್ 143 – ಅಕ್ರಮವಾಗಿ ಗುಂಪು ಸೇರುವುದು, 6 ತಿಂಗಳ ಜೈಲು

ಐಪಿಸಿ ಸೆಕ್ಷನ್ 147, 148 – ಗಲಭೆ ಸೃಷ್ಟಿಸುವುದು, 3 ವರ್ಷ ಜೈಲು

ಐಪಿಸಿ ಸೆಕ್ಷನ್ 353, 333 – ಕರ್ತವ್ಯ ನಿರತ ಅಧಿಕಾರಿಗಳ ಮೇಲೆ ಹಲ್ಲೆ, 10 ವರ್ಷ ಜೈಲು

ಐಪಿಸಿ ಸೆಕ್ಷನ್ 436 – ಸ್ಫೋಟಕ ಬಳಸಿ ಮನೆಗೆ ಬೆಂಕಿ ಹಚ್ಚುವುದು

ಐಪಿಸಿ ಸೆಕ್ಷನ್ 427 – ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡುವುದು, 2 ವರ್ಷ ಜೈಲು

ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ-1984 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.

RELATED ARTICLES

Related Articles

TRENDING ARTICLES