Wednesday, January 22, 2025

ಕೆ.ಜಿ ಹಳ್ಳಿ ಗಲಭೆಗೆ ಗುಪ್ತಚರ ಇಲಾಖೆ ದುರ್ಬಲವಾಗಿರುವುದೇ ಕಾರಣ : ತನ್ವೀರ್ ಸೇಠ್

ಮೈಸೂರು : ಬೆಂಗಳೂರಿನ ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆಗೆ ರಾಜ್ಯದ ಗುಪ್ತಚರ ಇಲಾಖೆ ದುರ್ಬಲವಾಗಿರುವುದೇ ಕಾರಣ ಎಂದು ಮೈಸೂರಿನ ಎನ್.ಆರ್.ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಆರೋಪಿಸಿದ್ದಾರೆ. 

ರಾಜ್ಯದಲ್ಲಿ ಗುಪ್ತಚರ ಇಲಾಖೆ ತುಂಬಾ ವೀಕ್ ಆಗಿದೆ. ಮುಂದೆ ಏನಾಗುತ್ತೆ ಅಂತ ಗುಪ್ತಚರ ಇಲಾಖೆಗೆ ಗೊತ್ತಿರಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ಮಾಡುವುದರಿಂದ‌ ಅನೇಕ ಪ್ರಾಣ ಹಾನಿ ಆಗುತ್ತದೆ. ಇಂಟೆಲಿಜೆನ್ಸಿ ಬಹಳ ಜವಾಬ್ದಾರಿಯುತವಾದ ಇಲಾಖೆ. ಗುಪ್ತಚರ ಇಲಾಖೆ ವೈಫಲ್ಯದಿಂದ ಶಾಂತಿ ಕದಡಿದೆ. ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಗುಪ್ತಚರ ಆಕ್ಟೀವ್ ಆಗಿರಬೇಕಿತ್ತು ಎಂದು ಟೀಕಿಸಿದ್ದಾರೆ.

ಮೊದಲು ನಾವು ಶಾಂತಿ ಕಾಪಾಡಿಕೊಳ್ಳೋಣ.ಗಲಭೆ ಸಂಬಂಧ ಎಲ್ಲಿ ವೈಫಲ್ಯಗಳು ಆಗಿವೆ ಎಂಬುದನ್ನು ತನಿಖೆ ಮಾಡಲು ಸರ್ಕಾರವನ್ನ ಒತ್ತಾಯಿಸುತ್ತೇನೆ. ರಾಮ ಮಂದಿರ ಭೂಮಿ ಪೂಜೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕೋಮು ಗಲಭೆ ಪ್ರಚೋದಿತ ಪೋಸ್ಟ್‌ಗಳನ್ನ ಹಾಕಲಾಗುತ್ತಿದೆ. ಇತ್ತೀಚೆಗೆ ಇದರಿಂದ ಕೆಟ್ಟ ಸಂಸ್ಕೃತಿ ಬೆಳೆಯುತ್ತಿದೆ.

ಕೆ.ಜಿ ಹಳ್ಳಿ ಗಲಭೆಯಲ್ಲಿ ಮೃತಪಟ್ಟ ಯುವಕನಿಗೆ ಕೊರೋನಾ ಪಾಸಿಟಿವ್ ..!

ಆಳುವ ಸರ್ಕಾರಗಳು ಉದ್ಯೋಗ ಸೃಷ್ಠಿ ಮಾಡಬೇಕು.ದುಡಿಯುವ ಕೈಗಳಿಗೆ ಕೆಲಸ ನೀಡಿದಾಗ ಇಂತಹ ಘಟನೆಗಳನ್ನ ತಡೆಯಬಹುದು. ಕೇಂದ್ರ ಸರ್ಕಾರ ಈಗಾಗಲೇ ಅನೇಕ ಆಪ್‌ಗಳನ್ನ ನಿಷೇಧ ಮಾಡಿದೆ. ಇನ್ನಷ್ಟು ಆಪ್ ನಿಷೇಧ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಇತ್ತೀಚೆಗೆ ಆನ್‌ಲೈನ್ ಕ್ಲಾಸ್ ಬಂದು ಎಲ್ಲರ ಕೈಲಿ ಮೊಬೈಲ್ ಬಂದಿವೆ. ಇದರಿಂದ ಹೊರಗಿನ ವಾತವರಣ ಮತ್ತಷ್ಟು ಹಾಳಾಗುತ್ತಿದೆ. ಯುವಕರು ಶಾಂತಿ ಕಾಪಾಡಬೇಕು ಎಂದರು. 

ಕೆ.ಜಿ ಹಳ್ಳಿ ಗಲಭೆ : SDPI ಮುಖಂಡ ಮುಜಾಮಿಲ್ ಪಾಷಾ ಅರೆಸ್ಟ್

1986 ರಲ್ಲಿ ಮೈಸೂರಲ್ಲಿ ಇಂತಹ ಹೇಳಿಕೆಯಿಂದ ಶಾಂತಿ ಕದಡಿತ್ತು. ಹೀಗಾಗಿ ಪೊಲೀಸ್, ಗುಪ್ತಚರ ಇಲಾಖೆ ಮತ್ತಷ್ಟು ಎಚ್ಚರಿಕೆವಹಿಸಬೇಕಾಗುತ್ತದೆ. ಗಲಭೆ ಸಂಬಂಧ ಅಖಂಡ ಶ್ರೀನಿವಾಸ್‌ ಮೂರ್ತಿ ಈಗಾಗಲೇ ಕ್ಷಮೆ ಕೇಳಿದ್ದಾರೆ. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಆಗಲೇಬೇಕು. ಯುವಕರು ವಾಕ್‌ ಸ್ವಾತಂತ್ರ್ಯವನ್ನ ಸೋಷಿಯಲ್ ಮೀಡಿಯಾಗಳಲ್ಲಿ ದುರ್ಬಳಕೆ ಮಾಡಿಕೊಳ್ಳಬಾರದು.
ಜಾತಿ ವ್ಯವಸ್ಥೆಯಲ್ಲಿ ಸಮಾಜ ಇಬ್ಬಾಗ ಮಾಡುವುದು ಬೇಡ ಎಂದು ಹೇಳಿದ್ದಾರೆ. 

ಫೇಸ್​ಬುಕ್​ನಲ್ಲಿ ಅವಹೇಳನಕಾರಿ ಪೋಸ್ಟ್​ ; ಹೊತ್ತಿ ಉರಿದ  ಬೆಂಗಳೂರಿನ ಕೆ.ಜಿ ಹಳ್ಳಿ , ಡಿ.ಜೆ ಹಳ್ಳಿ..!

RELATED ARTICLES

Related Articles

TRENDING ARTICLES