Wednesday, January 22, 2025

ಅಕ್ರಮ ಮರ ಸಾಗಾಟ ಪತ್ತೆ: ಆರೋಪಿ ಅರೆಸ್ಟ್..!

ದಕ್ಷಿಣ ಕನ್ನಡ :ಸುಳ್ಯದ ಪಂಜ ಅರಣ್ಯ ಇಲಾಖಾ ವ್ಯಾಪ್ತಿಯ ಐವತೊಕ್ಲು ಗ್ರಾಮದ ಪುಂಡಿಮನೆ ಎಂಬಲ್ಲಿ ಅಕ್ರಮ ಮರದ ದಿಮ್ಮಿ ಸಾಗಾಟ ಪ್ರಕರಣವನ್ನು ಅರಣ್ಯ ಇಲಾಖೆಯವರು ಪತ್ತೆ ಹಚ್ಚಿದ್ದು, ಮರ ಸಹಿತ ಆರೋಪಿಯನ್ನ ದಸ್ತಗಿರಿ ಮಾಡಿದ್ದಾರೆ. ಆರೋಪಿಯನ್ನು ಮುಸ್ತಫಾ ಎಂದು ಗುರುತಿಸಲಾಗಿದೆ.
ಪಿಕಪ್ ವಾಹನದಲ್ಲಿ 9 ಮರದ ದಿಮ್ಮಿಗಳು ಹಾಗೂ ಸ್ಥಳದಲ್ಲಿ 29 ದಿಮ್ಮಿಗಳು ಸೇರಿ ಒಟ್ಟು 38 ಮರದ ದಿಮ್ಮಿಗಳು ಹಾಗೂ ಪಿಕಪ್ ವಾಹನವನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಸುಬ್ರಹ್ಮಣ್ಯ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಸ್ಟೀನ್ ಸೋನ್ಸ್ ರವರ ಮಾರ್ಗದರ್ಶನದಲ್ಲಿ ಪಂಜ ವಲಯದ ಅರಣ್ಯಾಧಿಕಾರಿಗಳಾದ ಮಂಜುನಾಥ್ ನೇತೃತ್ವದಲ್ಲಿ,ಉಪ ವಲಯ ಅರಣ್ಯಾಧಿಕಾರಿಗಳಾದ ಸಂತೋಷ್,ಅರಣ್ಯ ರಕ್ಷಕರಾದ ಗೀತಾ ರಾಜೇಶ್,ಅರಣ್ಯ ವೀಕ್ಷಕರಾದ ಮಹೇಶ್, ವಿಜಯಕುಮಾರ್, ಮೋಹನ್ ಈ ಕಾರ್ಯಾಚರಣೆ ನಡೆಸಿದ್ದಾರೆ‌.

-ಇರ್ಷಾದ್ ಕಿನ್ನಿಗೋಳಿ

RELATED ARTICLES

Related Articles

TRENDING ARTICLES