Sunday, December 22, 2024

ಮಹರ್ಷಿ ವಾಲ್ಮೀಕಿ ಮಂದಿರ ಸ್ಥಾಪನೆಗೆ ಪ್ರಧಾನಿ ಮೋದಿಗೆ ಮನವಿ

ಶಿವಮೊಗ್ಗ: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರದ ಜೊತೆಯಲ್ಲಿಯೇ ಶ್ರೀ ಮಹರ್ಷಿ ವಾಲ್ಮೀಕಿಯವರ ಮಂದಿರ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ, ರಾಜ್ಯ ವಾಲ್ಮೀಕಿ ನಾಯಕರ ಯುವ ಪಡೆಯ ಜಿಲ್ಲಾ ಘಟಕದ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಶಿಲಾನ್ಯಾಸ ನೆರವೇರಿದ್ದು, ಸಮಸ್ತ ಭಾರತೀಯರಿಗೆ ಸಂತೋಷದ ವಿಷಯ, ಹಿಂದೂಗಳ ಬಹುದಿನದ ಆಸೆ ಈಡೇರಿದೆ. ಆದರೆ, ಪ್ರಪಂಚಕ್ಕೆ ಶ್ರೀರಾಮನನ್ನು ಪರಿಚಯಿಸಿ, ರಾಮಾಯಣ ಮಹಾಕಾವ್ಯವನ್ನು ಜಗತ್ತಿಗೆ ಕೊಡುಗೆಯಾಗಿ ಕೊಟ್ಟವರು ವಿಶ್ವಕವಿ ಶ್ರೇಷ್ಟರಾದ ಶ್ರೀಮಹರ್ಷಿ ವಾಲ್ಮೀಕಿಯವರು. ಹಾಗಾಗಿ ವಾಲ್ಮೀಕಿಯವರ ಮಂದಿರವನ್ನು ಕೂಡ ಅಯೋಧ್ಯೆಯಲ್ಲಿ ನಿರ್ಮಾಣ ಮಾಡಬೇಕು ಎಂಬುದು ಸಮಸ್ತ ವಾಲ್ಮೀಕಿ ಸಮುದಾಯದವರ ಮನವಿ. ಆ ಮೂಲಕ ಶ್ರೀರಾಮ ಹಾಗೂ ಅವರನ್ನು ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿಯವರ ಆದರ್ಶಗಳು ವಿಶ್ವಕ್ಕೆ ಪರಿಚಯವಾಗುತ್ತದೆ ಎಂದು ಮನವಿಯಲ್ಲಿ ಕೋರಿದ್ದಾರೆ.

RELATED ARTICLES

Related Articles

TRENDING ARTICLES