ಬೆಂಗಳೂರು : ಅವರು ವೃದ್ಧ ದಂಪತಿ. ಅವರ ಮಗ ವಿಶೇಷ ಚೇತನ. ಇದ್ದೊಂದು ಮನೆಯ ಪುನರ್ ನಿರ್ಮಾಣಕ್ಕೂ ಅವರಿಂದ ಆಗ್ತಿರ್ಲಿಲ್ಲ. ವಿದ್ಯುತ್ ವ್ಯವಸ್ಥೆಯೂ ಇರ್ಲಿಲ್ಲ. ದಿಕ್ಕೇ ತೋಚದ ಆ ದಂಪತಿಗೆ ನೆರವಾಗಿದ್ದಾರೆ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್.
ಹೌದು, ತುಮಕೂರು ಜಿಲ್ಲೆಯ ಮಧುಗಿರಿಯ ನಾಗರಾಜು ಮತ್ತು ರಾಧಮ್ಮ ಎಂಬ ದಂಪತಿಯ ಬಾಳಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬೆಳಕಾಗಿದ್ದಾರೆ. ನಾಗರಾಜ್ ಮತ್ತು ರಾಧಮ್ಮ ವೃದ್ಧ ದಂಪತಿಯ ಮಗ ವಿಶೇಷಚೇತನ. ಮನೆಯ ನಿರ್ಮಾಣ ಕೆಲಸ ಐದು ವರ್ಷದಿಂದ ಅರ್ಧಕ್ಕೇ ನಿಂತಿತ್ತು. ಅದನ್ನು ಪೂರ್ಣ ಮಾಡಲು ಆಗಿರ್ಲಿಲ್ಲ. ಈ ವಿಷಯ ಸುದೀಪ್ ಗಮನಕ್ಕೆ ಬಂದಿದ್ದು, ಸುಮಾರು ಎರಡು ಲಕ್ಷ ರೂ ವೆಚ್ಚದಲ್ಲಿ ಮನೆಯ ಪುನರ್ ನಿರ್ಮಾಣ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.
ಇಂದು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ದಂಪತಿಗೆ ಮನೆಯನ್ನು ಹಸ್ತಾಂತರಿಸಿದೆ.
ಕಷ್ಟದಲ್ಲಿರುವವರಿಗೆ ಸದಾ ತಮ್ಮಿಂದಾದ ಸಹಾಯ ಮಾಡುವ ಸುದೀಪ್ ಈಗ ಮತ್ತೆ ಅಂತಹದ್ದೇ ಕೆಲಸದಿಂದ ಮಾದರಿಯಾಗಿದ್ದಾರೆ.