Saturday, January 18, 2025

ವಿರಾಟ್​ ಕೊಹ್ಲಿಯಿಂದ ಮತ್ತೊಂದು ರೆಕಾರ್ಡ್  ..!

ನವದೆಹಲಿ : ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್​ ಕೊಹ್ಲಿ ದಾಖಲೆಗಳ ಸರದಾರ! ಕ್ರಿಕೆಟ್​ನಲ್ಲಿ ಸಾಲು ಸಾಲು ರೆಕಾರ್ಡ್​​​​​​ಗಳನ್ನು ಮಾಡಿರುವ ರನ್​​ಮಷಿನ್ ಇದೀಗ ಮತ್ತೊಂದು ಹೊಸ ದಾಖಲೆ ಬರೆದಿದ್ದಾರೆ! ಅರೆ, ಟೀಮ್ ಇಂಡಿಯಾ ಸದ್ಯ ಯಾವ ಮ್ಯಾಚು ಆಡ್ತಿಲ್ಲ. ಈ ನಡುವೆ ಕೊಹ್ಲಿ ಯಾವ ರೆಕಾರ್ಡ್ ಮಾಡಿದ್ರು! ಇದೇನು ಕೊರೋನಾ ಲಾಕ್​​ಡೌನ್ ಗಿಂತ ಮೊದಲಿನ ಯಾವ್ದಾದ್ರುಮ್ಯಾಚ್​ ನ ಸುದ್ದಿನಾ? ಹಳೇ ರೆಕಾರ್ಡ್ ಬಗ್ಗೆನಾ ಅಂತ ಕೇಳ್ತಿದ್ದೀರಾ?

ಇದು ಹಳೇ ಸುದ್ದಿ ಅಲ್ಲ.. ಹೊಸ ಸುದ್ದಿನೇ..! ಆದ್ರೆ ಕ್ರಿಕೆಟ್​​​​ ಅಂಗಳದಲ್ಲಿ ಕಿಂಗ್ ಕೊಹ್ಲಿ ಬರೆದಿರೋ ರೆಕಾರ್ಡ್​ ಅಲ್ಲ, ಇದು ಸೋಶಿಯಲ್ ಮೀಡಿಯಾದಲ್ಲಿ ಅವರು ಮಾಡಿರೋ ಹೊಸ ರೆಕಾರ್ಡ್​​​ !

ಹೌದು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆ್ಯಕ್ಟಿವ್ ಆಗಿರೋ ಕೊಹ್ಲಿ ಇನ್​ಸ್ಟಾಗ್ರಾಮ್​ನಲ್ಲಿ 70  ಮಿಲಿಯನ್​​ ಫಾಲೋವರ್ಸ್​ ಹೊಂದಿರೋ ಭಾರತದ ಮೊದಲ ಕ್ರಿಕೆಟಿಗ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ವಿಶ್ವದ ಕ್ರೀಡಾ ತಾರೆಯರ ಪೈಕಿ ಕೊಹ್ಲಿ ಇನ್ಸ್ಟಾಗ್ರಾಮ್​ನಲ್ಲಿ ಇಷ್ಟೊಂದು ಫಾಲೋವರ್ಸ್ ಹೊಂದಿರೋ 4ನೇ ಆಟಗಾರರಾಗಿದ್ದಾರೆ. ಪೋರ್ಚುಗಲ್​​ನ ಫುಟ್ಬಾಲ್​​ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡ್​ (232 ಮಿಲಿಯನ್), ಬಾರ್ಸಿಲೋನಾ ಲೆಜೆಂಡ್​ ಲಿಯೋನೆಲ್ ಮೆಸ್ಸಿ (161 ಮಿಲಿಯನ್), ಬ್ರೆಜಿಲ್​ ಫುಟ್ಬಾಲ್ ಆಟಗಾರ ಪ್ಲೇಯರ್ ನೇಮರ್ (140 ಮಿಲಿಯನ್) ಫಾಲೋವರ್ಸ್ ಹೊಂದಿದ್ದಾರೆ. ಈ ಮೂವರ ಬಳಿಕ ಕೊಹ್ಲಿ ಸ್ಥಾನ ಪಡೆದಿದ್ದಾರೆ.

ಕೊಹ್ಲಿ ಈ ಹಿಂದೆ ಇನ್ಸ್ಟಾಗ್ರಾಮ್​ನಲ್ಲಿ ಒಂದು ಪೋಸ್ಟ್​ಗೆ 1.35 ಕೋಟಿ ರೂಪಾಯಿ ಪಡೆಯುತ್ತಿದ್ದರು. ಈಗ 3.6 ಕೋಟಿ ರೂ ಪಡೀತಿದ್ದಾರೆ ಅಂತ ವರದಿಯಾಗಿದೆ.

RELATED ARTICLES

Related Articles

TRENDING ARTICLES