ಧಾರವಾಡ : ಆ ಕುಟುಂಬದ ಮೇಲೆ ಅದ್ಯಾರ ಕಣ್ಣು ಬಿದ್ದಿತ್ತೋ ಏನೋ. ಬದುಕಿ ಬಾಳಬೇಕಿದ್ದ ಕುಟುಂಬ ಕೊರೋನಾ ಭಯಕ್ಕೆ ಇಹಲೋಕ ತ್ಯಜಿಸಬೇಕಾಗಿ ಬಂತು. ತನಗೆ ಕೊರೋನಾ ಸೋಂಕು ತಗುಲತ್ತೆ ಅನ್ನೋ ಭಯಕ್ಕೆ ಆ ಪುಣ್ಯಾತ್ಮ ತಮ್ಮ ಎರಡು ವರ್ಷದ ಹೆಣ್ಣು ಮಗು ಹಾಗೂ ಹೆಂಡತಿಗೆ ವಿಷ ಹಾಕಿ ತಾನೂ ನೇಣಿಗೆ ಶರಣಾದ. ಜಗತ್ತಿನಾಧ್ಯಂತ ದಾಂಗುಡಿ ಇಟ್ಟಿರುವ ಕೊರೋನಾ ಮಹಾಮಾರಿಗೆ ಅದೆಷ್ಟೋ ಜನ ಕಣ್ಮುಚ್ಚಿದ್ದಾರೆ. ಬೇರೆ ಬೇರೆ ರಾಷ್ಟ್ರಗಳಲ್ಲಂತೂ ಕೊರೋನಾ ಸೋಂಕಿತೆ ಸಾಲು ಸಾಲಾಗಿ ಶವಗಳು ಬಿದ್ದಿವೆ. ಬಹಳಷ್ಟು ಜನ ಸೋಂಕಿನಿಂದ ಮೃತಪಟ್ಟರೆ , ಇನ್ನೂ ಕೆಲವರು ಹೆದರಿ ಪ್ರಾಣ ಬಿಟ್ಟಿದ್ದಾರೆ. ಅಷ್ಟೋಂದು ಭಯಂಕರತೆ ಸಾಕ್ಷಿಯಾದ ಕೊರೋನಾಗೆ ಹೆದರಿ ಧಾರವಾಡದಲ್ಲಿ ಮೂವರು ಪ್ರಾಣಬಿಟ್ಟ ಘಟನೆ ನಡೆದಿದೆ. ಕೊರೋನಾ ಸೋಂಕು ತಗಲಬಹುದು ಎಂಬ ಭಯದಿಂದ ಧಾರವಾಡದ ಮಾರ್ಕೋಪೋಲೋ ಕಂಪನಿಯಲ್ಲಿ ಕಾರ್ಮೀಕನಾಗಿದ್ದ ಮೌನೇಶ ಪತ್ತಾರ ಎಂಬಾತ ತಮ್ಮ 2 ವರ್ಷದ ಹೆಣ್ಣು ಮಗು ಮತ್ತು ಹೆಂಡತಿಗೆ ವಿಷ ಕೊಟ್ಟು ನಂತರ ತಾನು ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾನೆ. ಮೃತ ಮೌನೇಶನ ಮನೆಯಲ್ಲಿ ಸಿಕ್ಕ ಡೆತ್ ನೋಟನಲ್ಲಿ ಕೊರೋನಾ ಭಯಕ್ಕೆ ತಾನು ತನ್ನ ಕುಟುಂಬದೊಂದಿಗೆ ಆತ್ಮಹತ್ತ್ಯೆ ಮಾಡಿಕೊಳ್ಳುವದಾಗಿ ಬರೆದುಕೊಂಡಿದ್ದಾನೆ ಎನ್ನಲಾಗಿದ್ದು, ಆ ಡೆತ್ ನೋಟ ಇದೀಗ ಪೊಲೀಸರ ಹತ್ತಿರವಿದೆ. ಕಳೆದೊಂದು ವಾರದಿಂದ ಮಾರ್ಕೋಪೋಲೋ ಕಂಪನಿಯ 20 ಕ್ಕೂ ಹೆಚ್ಚು ಕಾರ್ಮೀಕರಿಗೆ ಸೋಂಕು ತಗುಲಿದ್ದ ಪರಿಣಾಮ ಮೌನೇಶ ಗಾಬರಿಗೊಂಡಿದ್ದ ಎನ್ನಲಾಗಿದೆ.
ಮೌನೇಶ ಪತ್ತಾರ 8 ವರ್ಷಗಳಿಂದ ಮಾರ್ಕೋಪೋಲೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಅಕ್ಕಪಕ್ಕದವರ ಜೊತೆ ಉತ್ತಮ ಒಡನಾಟ ಹೊಂದಿದ್ದ. ಒಟ್ನಲ್ಲಿ ಕೊರೋನಾ ಭಯಕ್ಕೆ ಧಾರವಾಡದಲ್ಲಿ ಮೂವರು ಬಲಿಯಾಗಿದ್ದು ಮಾತ್ರ ಶೋಚನೀಯ. ಕೊರೋನಾ ಬಗ್ಗೆ ಭಯ ಬೇಡ ಜಾಗೃತಿ ಇರಲಿ ಅನ್ನೋದು ಪವರ ಟಿ ವಿ ಕಳಕಳಿ.
https://www.youtube.com/watch?v=VKihX5-LHc4