Monday, December 23, 2024

ನೊಣಗಳ ಕಾಟಕ್ಕೆ ಬೇಸತ್ತ ಗ್ರಾಮಸ್ಥರು

ಚಿತ್ರದುರ್ಗ: ಇಲ್ಲಿನ ದಂಡಿನ ಕುರುಬರ ಹಟ್ಟಿ ಗ್ರಾಮದಲ್ಲಿ ಎಲ್ಲಿ ನೋಡಿದರು ನೊಣಗಳದ್ದೆ ಹಾವಳಿ,ಮನೆ ಒಳಗೆ ಹೊರಗೆ ತಿನ್ನೋ ಆಹಾರ ಪದಾರ್ಥಗಳ ಮೇಲೆಲ್ಲಾ ನೊಣಗಳ ಕಾಟ ಇಂತಹ ದುಸ್ಥಿತಿ ಇರೋದು ಚಿತ್ರದುರ್ಗ ತಾಲ್ಲೂಕಿನ ದಂಡಿನ ಕುರುಬರ ಹಟ್ಟಿ ಗ್ರಾಮದದಲ್ಲಿ ಇದಕ್ಕೆ ಕಾರಣ ಗ್ರಾಮದ ಹೊರ ವಲಯದಲ್ಲಿ ಇರೋ ಕರ್ನಾಟಕ ಪೌಲ್ಟರಿ ಪಾರ್ಮ್ ಮಾಲೀಕರ ನಿರ್ಲಕ್ಷ್ಯ.ಕೋಳಿ ಪಾರಂ ನಿಂದ ಬರೋ ತಾಜ್ಯ ಹಾಗು ಕೋಳಿ ಗೊಬ್ಬರದ ಮೇಲೆ ನೊಣಗಳು ಪ್ರತಿನಿತ್ಯ ಗ್ರಾಮದ ಮನೆಮನೆಗೂ ಆವರಿಸುತ್ತವೆ,ಇದರಿಂದಾಗಿ ಗ್ರಾಮಸ್ಥರಿಗೆ ಆರೋಗ್ಯದ ಸಮಸ್ಯೆ ಬರಬಹುದು ಅಂತ ಭೀತಿಯಲ್ಲಿ ಇದ್ದಾರೆ.ಇತ್ತ ಒಂದು ಕಡೆ ಮನೆಯಿಂದ ಹೊರಹೋದರೆ ಕರೋನಾದ ಭೀತಿ ಇನ್ನೂ ಮನೆಯಲ್ಲಿ ಇದ್ದರೆ ನೊಣಗಳ ಕಾಟ ಈ ಕುರಿತು ಜಿಲ್ಲಾ ಆಡಳಿತದ ಗಮನಕ್ಕೆ ತರಲಾಗಿದೆ ಆದ್ರೆ ಇಲ್ಲಿಯವರೆಗು ಯಾವುದೆ ಪ್ರಯೋಜವಾಗಿಲ್ಲ ಅಂತ ಗ್ರಾಮಸ್ಥರು ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES