ಚಿತ್ರದುರ್ಗ : ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಪೋಲಿಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಪೋಲಿಸ್ ಠಾಣೆಯನ್ನು ಸಿಲ್ ಡೌನ್ ಮಾಡಲಾಗಿದೆ. ಇನ್ನು ಹೊಸದುರ್ಗ ನಗರದ ಪೋಲಿಸ್ ಠಾಣೆಯನ್ನು ತಾತ್ಕಾಲಿಕವಾಗಿ ಸಿಲ್ ಡೌನ್ ಮಾಡಲಾಗಿದೆ. ನಗರದ ದುರ್ಗಾಂಬಿಕಾ ಸಮುದಾಯ ಭವನಕ್ಕೆ ಕಚೇರಿಯನ್ನು ಶಿಫ್ಟ್ ಮಾಡಲಾಗಿದೆ. ಇದರಿಂದಾಗಿ ಚಿತ್ರದುರ್ಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಅತಂಕ ಸ್ಥಳೀಯ ಜನರಲ್ಲಿ ಹೆಚ್ಚಾಗಿದೆ