Wednesday, January 22, 2025

ಮೇಲ್ಮನೆಗೆ ಸಿ.ಪಿ.ಯೋಗೇಶ್ವರ್ !?

ಬೆಂಗಳೂರು : ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಅತೃಪ್ತ ಶಾಸಕರನ್ನು ಸೆಳೆದು ಬಿಜೆಪಿ ಸರ್ಕಾರ ಬರಲು ಪ್ರಮುಖ ಕಾರಣವಾಗಿದ್ದ ಸಿ.ಪಿ. ಯೋಗೇಶ್ವರ್ ಗೆ ಮಂತ್ರಿಯಾಗುವ ಭಾಗ್ಯ ಕೂಡಿ ಬಂದಿರುವಂತಿದೆ, ಉಪಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಲು ಪ್ರಯತ್ನ ಪಟ್ಟುರು ಅವಕಾಶ ಸಿಗದೆ ಸ್ಪರ್ಧಿಸಲಾಗಲಿಲ್ಲ .

ಈಗ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವ ಎಲ್ಲ ಸಾಧ್ಯತೆಯಿದ್ದು, ಆ ಮೂಲಕ ಅವರನ್ನು ಮಂತ್ರಿ ಮಾಡುವ ಯೋಜನೆ ಯಡಿಯೂರಪ್ಪ ಅವರ ತಲೆಯಲ್ಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಜೂನ್ ತಿಂಗಳಲ್ಲಿ ನಡೆಯಲಿರುವ ಮೇಲ್ಮನೆ ಚುನಾವನೆಗೆ ಸಿದ್ದವಾಗುವಂತೆ ಸ್ವತಃ ಯಡಿಯೂರಪ್ಪ ಸಿ.ಪಿ.ಯೋಗೇಶ್ವರ್ ಗೆ ಸೂಚನೆ ನೀಡಿದ್ದಾರೆನ್ನಲಾಗಿದೆ . ಅವರನ್ನು ಆಗ್ನೇಯ ಪದವೀಧರ ಕ್ಷೇತ್ರದಿಂದ ಕಣಕ್ಕಿಳಿಸಲು ಪ್ಲಾನ್ ಕೂಡ ಸಿದ್ದವಾಗಿದಿಯಂತೆ .

RELATED ARTICLES

Related Articles

TRENDING ARTICLES