Monday, December 23, 2024

ಜೆಡಿಎಸ್ ಜೊತೆ ಮೈತ್ರಿ ಬೇಕಿಲ್ಲ ..! ಸಿ.ಎಂ. ಯಡಿಯೂರಪ್ಪ

ರಾಣೆಬೆನ್ನೂರು : ರಾಜ್ಯದಲ್ಲಿ ಉಪಸಮರ ಜೋರಾಗಿದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರ್ಜರಿ ಮತಭೇಟೆ ಶುರುಮಾಡಿದ್ದಾರೆ.
ಇಂದು ರಾಣೆಬೆನ್ನೂರು ಕ್ಷೇತ್ರದ ಪ್ರಚಾರಕ್ಕೆ ಅಗಮಿಸಿದ ಸಿ.ಎಂ. ಉಪಚುನಾವಣೆಯಲ್ಲಿ 15 ಕ್ಷೇತ್ರದಲ್ಲೂ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ರು ,ಇನ್ನೂ ಮೂರುವರೆ ವರ್ಷ ಸರ್ಕಾರ ಇರ್ಬೇಕು ಅಂತಾ ಜನರ ಅಪೇಕ್ಷೆ ಇದೆ ,ಈಗ ಎಷ್ಟು ಅಂತರದಲ್ಲಿ ಗೆಲ್ಲಬೇಕು ಎಂಬುದಕ್ಕೆ ಫೈಟ್ ಮಾಡ್ತಾ ಇದ್ದಿವಿ ಆಂತ ತಿಳಿಸಿದ್ರು .
ಪ್ರತಿಪಕ್ಷದವರು ಏನು ಬೇಕಾದರು ಮಾಡಬಹುದು, ಅವರಿಗೆ ಸ್ವಾತಂತ್ರ್ಯ ಇದೆ ಮತಾದಾರರು ನಮ್ಮ ಜೊತೆಗಿದ್ದು 4 ತಿಂಗಳ ಆಡಳಿತ ಜನ ಮೆಚ್ಚಿದ್ದಾರೆ ಎಂದರು , ಬಹುಮತ ಬರಲ್ಲ ಎಂಬ ಜೆಡಿಎಸ್ ಮಾತಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ನಮ್ಗೆ ಜೆಡಿಎಸ್ ಬೆಂಬಲ ಬೇಕಿಲ್ಲ ಎನ್ನುವ ಮೂಲಕ ಚುನಾವಣೆ ಬಳಿಕ ಜೆಡಿಎಸ್ ಜೊತೆ ಮೈತ್ರಿ ಪ್ರಸ್ತಾಪವನ್ನು ತಳ್ಳಿಹಾಕಿದ್ದಾರೆ.

ಉಪ ಸಮರದ 15 ಕ್ಷೇತ್ರದಲ್ಲೂ ಸಿಎಂ ಯಡಿಯೂರಪ್ಪಗೆ ಗೆಲ್ಲುವ ವಿಶ್ವಾಸ
ರಾಣೆಬೆನ್ನೂರು ಕ್ಷೇತ್ರದ ಪ್ರಚಾರಕ್ಕೆ ಆಗಮಿಸಿದ ಬಿಎಸ್​ವೈ ಹೇಳಿಕೆ
ಇನ್ನೂ ಮೂರೂವರೆ ವರ್ಷ ಸರ್ಕಾರ ಇರಬೇಕು ಅಂತಾ ಜನರ ಅಪೇಕ್ಷೆ ಇದೆ
ಈಗ ಎಷ್ಟು ಅಂತರದಲ್ಲಿ ಗೆಲ್ಲಬೇಕು ಎಂಬುವುದಕ್ಕೆ ಫೈಟ್ ಮಾಡ್ತಾ‌ ಇದ್ದೇವೆ
ಪ್ರತಿಪಕ್ಷದವರು ಏನು ಬೇಕಾದರೂ ಮಾಡಬಹುದು ಅವರಿಗೆ ಸ್ವಾತಂತ್ರ್ಯ ಇದೆ
ಮತದಾರರು ನಮ್ಮ ಜೊತೆಗಿದ್ದು ಕಳೆದ 4 ತಿಂಗಳ ಆಡಳಿತ ಮೆಚ್ಚಿದ್ದಾರೆ
ಬಹುಮತ ಬರಲ್ಲ ಎಂಬ ಮಾತೇ ಇಲ್ಲ, ಜೆಡಿಎಸ್​ ಸಹಕಾರ ಬೇಕಿಲ್ಲ
ಉಪ ಸಮರದ ಬಳಿಕ ಜೆಡಿಎಸ್​ ಮೈತ್ರಿ ಪ್ರಸ್ತಾಪ ತಳ್ಳಿಹಾಕಿದ ಯಡಿಯೂರಪ್ಪ

RELATED ARTICLES

Related Articles

TRENDING ARTICLES