Thursday, March 28, 2024

ಒಂದೇ ದಿನ 14  ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್…!!

ಕೊಡಗು : ಕೊರೊನಾ ಮಹಾಮಾರಿ ವಿರುದ್ಧ ಹೋರಾಡುತ್ತಾ, ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮತ್ತು ನರ್ಸ್‍ಗಳು ಸೇರಿದಂತೆ ಒಂದೇ ದಿನ 14 ಜನರಿಗೆ ಪಾಸಿಟಿವ್ ಮಹಾಮಾರಿ ಅಟ್ಯಾಕ್ ಆಗಿದೆ. ಮಡಿಕೇರಿಯಲ್ಲಿರುವ ಕೊಡಗು ಕೊವಿಡ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ 7 ವೈದ್ಯರು ಮತ್ತು ನರ್ಸ್‍ಗಳಿಗೆ ಕೊರೊನಾ ಆಗಿದೆ. ಇನ್ನು ಕೊರೊನಾ ಪೇಷೆಂಟ್ 9583 ನೇ ರೋಗಿಯ ಸಂಪರ್ಕದಿಂದ ಮೂವರಿಗೆ ಪಾಸಿಟಿವ್ ಆಗಿದ್ದರೆ, 9215 ನೇ ರೋಗಿಯ ಸಂಪರ್ಕದಿಂದ ಇಬ್ಬರಿಗೆ ಮಹಾಮಾರಿ ವಕ್ಕರಿಸಿದೆ. ಅಲ್ಲದೆ ರೋಗ ಲಕ್ಷಣದಿಂದ ಕೊವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಮತ್ತಿಬ್ಬರಿಗೆ ಕೊರೊನಾ ಹೆಗಲೇರಿದೆ. ಹೀಗಾಗಿ ಒಟ್ಟು ಒಂದೇ ದಿನ ಬರೋಬ್ಬರಿ 14 ಜನರಿಗೆ ಮಹಾಮಾರಿ ವಕ್ಕರಿಸಿದ್ದಾಳೆ. ಹೀಗಾಗಿ ಕೊಡಗಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ 22 ಕ್ಕೆ ಏರಿದೆ. ಇನ್ನು ಮಡಿಕೇರಿಯ ಜಿಲ್ಲಾಸ್ಪತ್ರೆ ಕೊವಿಡ್ ಆಸ್ಪತ್ರೆಯಾಗಿ ಬದಲಾಗಿದ್ದರಿಂದ ನಗರ ಅಶ್ವಿನಿ ಆಸ್ಪತ್ರೆಯನ್ನು ಜನರಲ್ ಆಸ್ಪತ್ರೆಯಾಗಿ ಬದಲಾಯಿಸಲಾಗಿತ್ತು. ಆದರೆ ಆಶ್ವಿನಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿತ್ತಿದ್ದ ವೈದ್ಯರಿಗೂ ಕೊರೊನಾ ಹೆಗಲೇರಿದೆ. ಹೀಗಾಗಿ ಅಶ್ವಿನಿ ಆಸ್ಪತ್ರೆಯನ್ನು ನಾಳೆ ಸೀಲ್ ಡೌನ್ ಮಾಡಿ ಸ್ಯಾನಿಟೈಸರ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮತ್ತು ನರ್ಸ್‍ಗಳಿಗೂ ಕೊರೊನಾ ಪಾಸಿಟಿವ್ ಪ್ರಕರಣ ಆಗಿರುವುದರಿಂದ ಜಿಲ್ಲೆಯಲ್ಲಿ ಸಾಕಷ್ಟು ಆತಂಕ್ಕೆ ಕಾರಣವಾಗಿದೆ. ಅಲ್ಲದೆ ಜನರಲ್ ಅಶ್ವಿನಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ನರ್ಸ್ ಗಳಿಗೂ ಕೊರೊನಾ ಪಾಸಿಟಿವ್ ಆಗಿರುವುದು, ಇಲ್ಲಿನ ಚಿಕಿತ್ಸೆ ಪಡೆದುಕೊಂಡ ಇತರೆ ರೋಗಿಗಳಿಗೂ ಇದು ಆತಂಕಕ್ಕೆ ಎಡೆಮಾಡಿದೆ. ಒಟ್ಟಿನಲ್ಲಿ ಕಳೆದ ಒಂದು ತಿಂಗಳಿನಿಂದ ಕೊಡಗಿನತ್ತ ಸುಳಿಯದ ಕೊರೊನಾ ಮಹಾಮಾರಿ ಮೂರು ದಿನಗಳಿಂದ ಎರಡಂಕಿಯ ಮೇಲೆ ಬರುತ್ತಿರುವುದು ಕೊಡಗಿನ ಜನರನ್ನು ಆತಂಕ್ಕೆ ದೂಡಿದೆ.

RELATED ARTICLES

Related Articles

TRENDING ARTICLES