Friday, April 19, 2024

SSLC ವಿದ್ಯಾರ್ಥಿಗೆ ಕೊರೋನಾ ಧೃಡ..!

ಗದಗ : ಸಾಕಷ್ಟು ಪರ ವಿರೋಧಗಳ ನಡುವೆ ನಾಳೆ ರಾಜ್ಯಾಂದಂತ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯಲಿವೆ. ಆದರೆ ಇನ್ನೇನು ಪರೀಕ್ಷೆಗೆ ಕೆಲವೇ ಗಂಟೆಗಳು ಬಾಕಿ ಎನ್ನುವಷ್ಟರಲ್ಲೇ ಕೊರೊನಾ ಎಚ್ಚರಿಕೆ ಘಂಟೆ ಬಾರಿಸಿದೆ.ಹೌದು ಗದಗ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗೆ ಕೊರೋನಾ ಪಾಸಿಟಿವ್ ದೃಢವಾಗಿದ್ದು ಮತ್ತಷ್ಟು ಆತಂಕ ಹೆಚ್ಚಿಸತೊಡಗಿದೆ.ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಾಳೆ‌ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಯೋರ್ವನಿಗೆ ಕೊರೋನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ದೃಢವಾಗಿದೆ.

 ಮೂಲತಃ ವಿಜಯಪುರ ಜಿಲ್ಲೆಯಿಂದ ಜೂನ್ 20 ರಂದು‌ ಲಕ್ಷ್ಮೇಶ್ವರ ಪಟ್ಟಣಕ್ಕೆ ಪರೀಕ್ಷೆ ಬರೆಯಲು ಮೂವರು ವಿದ್ಯಾರ್ಥಿಗಳು ಕಾರಿನಲ್ಲಿ ಆಗಮಿಸಿದ್ರು. ಲಕ್ಷ್ಮೇಶ್ವರ ಪಟ್ಟಣದ ಮೂಖ‌ ಹಾಗೂ ಕಿವುಡ ಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿಗಳು ಇವರಾಗಿದ್ದು ಈ ಮೂವರ ಪೈಕಿ ಓರ್ವ ವಿದ್ಯಾರ್ಥಿಗೆ ಕರೊನಾ ಲಕ್ಷಣಗಳು ಕಂಡು ಬಂದಿದೆ.ಈ ಹಿನ್ನೆಲೆ ತಪಾಸಣೆಗೆ ಒಳಪಡಿಸಿದಾಗ ಓರ್ವವಿದ್ಯಾರ್ಥಿಗೆ ಕರೊನಾ ಸೋಂಕು‌ ತಗಲಿರುವದು ದೃಢವಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ‌ ಜಿ ಹಿರೇಮಠ ಪವರ್ ಟಿವಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಪಾಸಿಟಿವ್ ಸೋಂಕು ತಗಲಿದ ವಿದ್ಯಾರ್ಥಿ ಪರೀಕ್ಷೆಗೆ ಅವಕಾಶ ನೀಡುವುದಿಲ್ಲಾ ಎಂದು‌ ಸಹ  ಹೇಳಿದ್ದು ಇನ್ನು ಪಾಸಿಟಿವ್ ಬಂದ ವಿದ್ಯಾರ್ಥಿಯ ಜೊತೆಗೆ ಸಂಪರ್ಕದಲ್ಲಿರುವ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಇತರ ವಿದ್ಯಾರ್ಥಿಗಳ ಗಂಟಲಿನ ಮಾದರಿ ಟೆಸ್ಟ್ ಕಳುಹಿಸಿ ಕೊಡಲಾಗಿದೆ. ‌ಇಂದು ರಾತ್ರಿಯೊಳಗೆ ಅವರ ರಿಪೋರ್ಟ್​ ಬರುವಂತೆ ವ್ಯವಸ್ಥೆ ಮಾಡಲಾಗಿದೆ.ನೆಗಟಿವ್ ಬಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವದು, ಅದರಲ್ಲಿ ಅಕಸ್ಮಾತ್ ಪಾಸಿಟಿವ್ ಏನಾದ್ರೂ ಬಂದ್ರೆ ಪರೀಕ್ಷೆಗೆ ಅವಕಾಶ ನೀಡೋದಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದು ಉಳಿದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಯಾವುದೇ ಭಯ ಪಡುವ ಅಗತ್ಯವಿಲ್ಲ. ಧೈರ್ಯವಾಗಿ ಪರೀಕ್ಷೆ ಬರೆಯಬಹುದು ಅಂತಾ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಡಿಸಿ ಎಂ.ಜಿ.ಹಿರೇಮಠ ವಿಶ್ವಾಸ ನೀಡಿದ್ದಾರೆ.

RELATED ARTICLES

Related Articles

TRENDING ARTICLES