Tuesday, December 5, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeಜಿಲ್ಲಾ ಸುದ್ದಿಚಿಕ್ಕೋಡಿ ಪೋಲಿಸ್ ಬಲೆಗೆ ಬಿದ್ದ ಅರಿಶಿನ ಚೋರರ ಗ್ಯಾಂಗ್ : ಒಂದು ಕೋಟಿಗೂ ಅಧಿಕ ಮೌಲ್ಯದ...

ಚಿಕ್ಕೋಡಿ ಪೋಲಿಸ್ ಬಲೆಗೆ ಬಿದ್ದ ಅರಿಶಿನ ಚೋರರ ಗ್ಯಾಂಗ್ : ಒಂದು ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು ಜಪ್ತಿ

ಚಿಕ್ಕೋಡಿ: ಅರಿಶಿಣ ಪುಡಿ ಸಾಗಿಸುವಾಗ ದಾರಿ ಮಧ್ಯೆ ಕದ್ದು ಬೇರೆಡೆಗೆ ಮಾರಾಟ ಮಾಡುತ್ತಿದ್ದ ಖತರ್​ನಾಕ್ ದರೋಡೆಕೋರರ ಗ್ಯಾಂಗ್ ಒಂದನ್ನ ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ. ಪಿರ್ಯಾದಿ ಆಧಾರದ ಮೇಲೆ ತನಿಖೆ ಆರಂಭಿಸಿದ ಪೋಲೀಸರು ಬಂಧಿತರಿಂದ ೧ ಕೋಟಿಗೂ ಹೆಚ್ಚಿನ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯಯಾದ್ಯಂತ ಅತಿ ಹೆಚ್ಚು ಬೆಳೆಯುವ ಅರಿಶಿಣ ಪುಡಿ ಪಕ್ಕದ ಮಹಾರಾಷ್ಟ್ರಕ್ಕೆ ಮರಾಟ ಮಾಡಲಾಗುತ್ತದೆ, ಇದನ್ನೆ ಬಂಡವಾಳ ಮಾಡಿಕೊಂಡಿದ್ದ ದರೋಡೆಕೋರ ಗ್ಯಾಂಗ್ ಒಂದು ಲಾರಿ ಸಮೇತ ಅರಿಶಿಣ ಕದ್ದು ಬೆರೆಡೆಗೆ ಮಾರಾಟ ಮಾಡಲು ಯತ್ನಿಸಿದವರನ್ನ ಬಂದಿಸಿ ಕಂಬಿ ಹಿಂದೆ ಕಳುಹಿಸುವಲ್ಲಿ ಚಿಕ್ಕೋಡಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಕಳೆದ ವಾರ ಜೂನ್ ೬ ರಂದು ತಮಿಳುನಾಡು ಮೂಲದ ಲಾರಿ ಹಾಗೂ ಚಾಲಕ ಎಂ.ಚಿನ್ನಸ್ವಾಮಿ ಎನ್ನುವವರು ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ ಅರಿಸಿಣ ತುಂಬಿಸಿಕೊಂಡು ರಾತ್ರಿ 3:30 ಕ್ಕೆ ನಿಪ್ಪಾಣಿ ಮುಧೋಳ ಹೈವೇ ಮೂಲಕ ಮಹಾರಾಷ್ಟ್ರದ ಸಾಂಗ್ಲಿಗೆ ಹೋಗುವಾಗ ಚಿಕ್ಕೋಡಿ ತಾಲೂಕಿನ ಕಬ್ಬುರ ಗ್ರಾಮದ ಬಳಿ ಲಾರಿ ಅಡ್ಡಗಟ್ಟಿ ನಾಲ್ಕು ಜನರ ಗುಂಪು ಅರಿಶಿಣ ತುಂಬಿದ ಲಾರಿ ಸಮೇತ ಚಾಲಕ ಹಾಗೂ ಕ್ಲೀನರ ನನ್ನ ಕಿಡ್ನಾಪ ಮಾಡಿ ಲಾರಿ ಚಾಲಕ ಹಾಗೂ ಕ್ಲೀನರ ನನ್ನ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹೊರವಲಯದಲ್ಲಿ ಬೀಸಾಕಿ ಲಾರಿ ತೆಗೆದುಕೊಂಡು ದರೋಡೆಕೋರರು ಪರಾರಿಯಾಗಿದ್ದರು.

ಚಿಕ್ಕೋಡಿ ಪೊಲೀಸ ಠಾಣೆಯಲ್ಲಿ ಪ್ರಕರಣದ ಪಿರ್ಯಾದಿ ದಾಖಲಾಗುತ್ತಿದ್ದಂತೆ ತನಿಖೆ ನಡೆಸಿದ ಪೊಲೀಸರಿಗೆ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದ್ದು, ಒಟ್ಟು 7 ಜನ ದರೋಡೆಕೋರರು ಮೊದಲೇ ಪ್ಲಾನಿಂಗ ನಡೆಸಿ ದರೋಡೆ ಮಾಡುವುದನ್ನೆ ತಮ್ಮ ವೃತ್ತಿ ಮಾಡಿಕೊಂಡಿದ್ದರು‌. ಪಾಂಡುರಂಗ ಹಳ್ಳೂರ ಎಂಬಾತ ಆರೋಪಿ ಗೋಕಾಕ ಹಾಗೂ ರಾಯಬಾಗ ತಾಲೂಕಿನ ಸುತ್ತಲು ಅರಿಶಿಣ ತುಂಬಿಸುವ ಕೆಲಸ ಮಾಡಿಸುತ್ತಿದ್ದ ತಾನು ತುಂಬಿಸಿದ ಲಾರಿಗಳ ಇನ್ಫಾರ್ಮೇಶನ್ ಲೀಕ್ ಮಾಡಿ ಸಹಚರರಿಗೆ ಕೊಟ್ಟು ತಾನೆ ದರೋಡೆ ಮಾಡಿಸಲು ಸುಪಾರಿ ಕೊಡುತ್ತಿದ್ದ.

ರಾತ್ರಿ ಸಮಯದಲ್ಲಿ ಲಾರಿ ದರೋಡೆ ಮಾಡಿದ ಬಳಿಕ ಕದ್ದ ಅರಿಶಿಣ ಮಾಲನ್ನ ಮತ್ತೆ ತನ್ನ ಮನೆಗೆ ತಂದು ಪಾಲಿಶ್ ಮಾಡಿಸಿ ಮತ್ತೆ ಅದನ್ನೆ ಬೇರೆಡೆಗೆ ಮಾರಾಟದ ಮಾಡುತ್ತಿದ್ದ. ಕದ್ದ ಮಾಲು ಮಾರಾಟ ಮಾಡಿ ಬಳಿಕ ಬಂದ ಹಣವನ್ನು ಎಲ್ಲರೂ ಸೇರಿ ಹಂಚಿಕೊಳ್ಳುತ್ತಿದ್ದರು. ಚಿಕ್ಕೋಡಿ ಪೊಲೀಸರು ವಿಚಾರಣೆ ನಡೆಸುತ್ತ ಹೋದಂತೆ ಈಡಿ ಗ್ಯಾಂಗ್ ಚೈನ್ ಬಗ್ಗೆ ಮಾಹಿತಿ ಹೊರಬಂದಿದೆ. ಹಲವು ದರೋಡೆಗಳನ್ನು ಸಹ ಈ ಗ್ಯಾಂಗ್ ಈಗಾಗಲೇ ಮಾಡಿದ್ದು ಬೆಳಕಿಗೆ ಬಂದಿದೆ. ಸದ್ಯ ದರೋಡೆಯಲ್ಲಿ ಭಾಗಿಯಾದ ಸಹಾಯ ಮಾಡಿದ ಒಟ್ಟು 7 ಅರೋಪಿಗಳನ್ನ ಪೊಲೀಸರು ಬಂಧಿಸಿದ್ಧು ಇನ್ನು ಮೂರು ಆರೋಪಿಗಳಿಗಾಗಿ ಬಲೆ ಬಿಸಿದ್ದಾರೆ. ಬಂದಿತರಿಂದ ದರೋಡೆಯಾದ ಹಾಗೂ ದರೋಡೆ ಉಪಯೋಗಿಸಿದ ಮೂರು ಲಾರಿ, ಒಂದು ಟ್ರಾಕ್ಟರ್ ಎರಡು ಕಾರ, ಒಂದು ಬೈಕ್ ಹಾಗೂ 23 ಟನ್ ಅರಿಶಿಣ ಸೇರಿ ಅಂದಾಜು 1 ಕೋಟಿ ಮೌಲ್ಯದ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆ ತಂಡದಲ್ಲಿ ಭಾಗವಹಿಸಿದ್ದ DSP ಮನೋಜಕುಮಾರ ನಾಯಿಕ, CPI ಆರ್.ಆರ್.ಪಾಟೀಲ, PSI ಗಳಾದ ರಾಕೇಶ್ ಬಗಲಿ, ಎಲ್.ಎಮ್‌.ಆರಿ, ಎಸ್.ಸಿ.ಮಂಟೂರ, ರನ್ನ ಬೆಳಗಾವಿ ಎಸ್.ಪಿ ಲಕ್ಷ್ಮಣ ನಿಂಬರಗಿ ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲರಿಗೂ ಸ್ಪೂರ್ತಿ ತಂದ ಚಿಕ್ಕೋಡಿಯ ಪೋಲಿಸ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ.

118 COMMENTS

LEAVE A REPLY

Please enter your comment!
Please enter your name here

Most Popular

Recent Comments