ಮಹಿಳಾ ಕ್ರಿಕೆಟ್ ಬೆಳೆಯುತ್ತಿದೆ. ವಿಶ್ವಕ್ರಿಕೆಟ್ನಲ್ಲಿ ಭಾರತೀಯ ಆಟಗಾರ್ತಿಯರು ಸೇರಿದಂತೆ ಅನೇಕ ಸ್ಟಾರ್ ಕ್ರಿಕೆಟಿಗರು ಉದಯಿಸುತ್ತಿದ್ದಾರೆ. ಭಾರತೀಯ ವನಿತೆಯರು ಟಿ20 ವಿಶ್ವಕಪ್ನಲ್ಲಿ ರನ್ನರಪ್ ಆಗಿ ಹೊರಹೊಮ್ಮಿದ ಬೆನ್ನಲ್ಲೇ ಇದೀಗ ಮಹಿಳಾ ಇಂಡಿಯನ್ ಪ್ರಿಮಿಯರ್ ಲೀಗ್ ಆಯೋಜನೆ ಬಗ್ಗೆ ಚಿಂತನೆ ನಡೆದಿದೆ.
ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಸುನೀಲ್ ಗವಾಸ್ಕರ್ 2021ರಿಂದ ಮಹಿಳಾ ಐಪಿಎಲ್ ಟೂರ್ನಿ ಆರಂಭಿಸುವಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಸಲಹೆ ನೀಡಿದ್ದಾರೆ.
ಭಾರತೀಯ ಮಹಿಳಾ ಕ್ರಿಕೆಟಲ್ಲಿ ಅತ್ಯುತ್ತಮ ಆಟಗಾರ್ತಿಯರಿದ್ದಾರೆ. ಮಹಿಳಾ ಐಪಿಎಲ್ ನಡೆದಲ್ಲಿ ಅವರಿಗೆ ಮತ್ತಷ್ಟು ಸಹಕಾರಿ ಆಗಲಿದೆ. ಹೊಸ ಪ್ರತಿಭೆಗಳ ಅನ್ವೇಷಣೆ ಮೂಲಕ ಮತ್ತಷ್ಟೂ ಬಲಿಷ್ಠ ರಾಷ್ಟ್ರೀಯ ತಂಡವನ್ನು ಕಟ್ಟಲು ಸಾಧ್ಯ ಎಂದು ಗವಾಸ್ಕರ್ ಹೇಳಿದ್ದಾರೆ.
ಈಗಾಗಲೇ ಆಸ್ಟ್ರೇಲಿಯಾ 5 ಬಾರಿ ಮಹಿಳಾ ಬಿಗ್ ಬ್ಯಾಶ್ ಲೀಗ್ ನಡೆಸಿ ಯಶಸ್ವಿಯಾಗಿದೆ. ಇಂಗ್ಲೆಂಡ್ ಕೂಡ ಕಿಯಾ ಸೂಪರ್ ಲೀಗ್ ಎಂಬ ಮಹಿಳಾ ಟಿ20 ಲೀಗನ್ನು 4ಬಾರಿ ಆಯೋಜಿಸಿ ಸೈ ಎನಿಸಿಕೊಂಡಿದೆ. ಹೀಗಾಗಿ ಭಾರತದಲ್ಲೂ ಮಹಿಳಾ ಕ್ರಿಕೆಟ್ ಲೀಗ್ ನಡೆಸಿದರೆ ಉತ್ತಮ ಎಂಬುದು ಗವಾಸ್ಕರ್ ಅಭಿಪ್ರಾಯ. ಈ ಸಲಹೆಗೆ ಬಿಗ್ಬಾಸ್ ಸೌರವ್ ಗಂಗೂಲಿ ಏನಂತಾರೆ ಅನ್ನೋದು ಸದ್ಯದ ಕುತೂಹಲ.
ಮಹಿಳಾ IPL ಆರಂಭವಾಗುತ್ತಾ? ಗವಾಸ್ಕರ್ ಸಲಹೆಗೆ ಗಂಗೂಲಿ ಏನಂತಾರೆ?
TRENDING ARTICLES