ಅಶಿಸ್ತಿನ ನಡುವಳಿಕೆ ತೋರಿದ ಆರೋಪದಲ್ಲಿ 7 ಮಂದಿ ಕಾಂಗ್ರೆಸ್ ಸಂಸದರನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅಮಾನತುಗೊಳಿಸಿದ್ದಾರೆ.
ಬಜೆಟ್ ಅಧಿವೇಶನದಲ್ಲಿ ಪೇಪರ್ ಹರಿದು ಸ್ಪೀಕರತ್ತ ಎಸೆದಿದ್ದಾರೆ ಎನ್ನಲಾದ ಸಂಸದರನ್ನು ಸಸ್ಪೆಂಡ್ ಮಾಡಲಾಗಿದೆ. ಗೌರವ್ ಗೊಗೊಯಿ, ಟಿ.ಎನ್ ಪ್ರತಾಪನ್, ಡಿಯನ್ ಕುರಿಕೋಸ್, ಆರ್. ಉಣ್ಣಿತ್ತಾನ್, ಮನಿಕಮ್ ಟಾಗೋರ್, ಬೆನ್ನಿ ಬೆಹ್ನನ್ ಮತ್ತು ಗುರ್ಜೀತ್ ಸಿಂಗ್ ಜಾಜ್ ಲಾ ಅಮಾನತುಗೊಂಡಿರುವ ಸಂಸದರು.