ತುಮಕೂರು : ಸಚಿವ ಸ್ಥಾನ ಸಿಗ್ದಿದ್ರೆ ಸಚಿವರೆಲ್ಲಾ ಆತ್ಮಹತ್ಯೆ ಮಾಡಿಕೊಳ್ತಾರಂತೆ..! ಹೀಗಂತ ಎಡವಟ್ಟಿನ ಹೇಳಿಕೆ ನೀಡಿದ್ದಾರೆ ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್.
ತುಮಕೂರಲ್ಲಿ ಮಾತನಾಡಿದ ಅವರು, ”ಅವರೆಲ್ಲಾ ಮಂತ್ರಿ ಆಗಲೆಂದೇ ಪಕ್ಷ ಬಿಟ್ಟು ಹೋದವರು. ಮಂತ್ರಿ ಆಗದಿದ್ದರೇ ಅವರ ಜೀವವೇ ಹೋಗಿ ಬಿಡುತ್ತದೆ. ಸಚಿವ ಸ್ಥಾನ ಸಿಗಿದಿದ್ರೆ ಆತ್ಮಹತ್ಯೆ ಮಾಡಿಕೊಳ್ತಾರೆ” ಎಂದು ಮಂತ್ರಿಗಿರಿ ಸಿಗದೆ ನಿರಾಶರಾದವರ ಬಗ್ಗೆ” ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಯಡಿಯೂರಪ್ಪ ನಂಬಿಕಸ್ತರು, ಕೊಟ್ಟ ಮಾತನ್ನು ಉಳಿಸಿಕೊಳ್ಳುವ ದಿಟ್ಟ ನಾಯಕ ಎಂದು ಹಾಡಿ ಹೊಗಳಿದ್ದಾರೆ.