ದಾವಣಗೆರೆ : ನಾನು ರಾಜೀನಾಮೆ ಕೊಟ್ಟು ಮನೆಗೆ ಹೋಗೋದಕ್ಕೂ ಸಿದ್ಧನಾಗಿದ್ದೇನೆ ಅಂತ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ರಾಜೀನಾಮೆ ಮಾತನ್ನಾಡಿದ್ದಾರೆ.
ಹರಿಹರದಲ್ಲಿ ನಡೆದ ಹರ ಜಾತ್ರೆ ವೇಳೆ ಪಂಚಮಸಾಲಿ ಪೀಠದಲ್ಲಿ ವಚನಾನಂದ ಸ್ವಾಮೀಜಿ ಭಾಷಣ ಮಾಡುತ್ತಾ, ಪಂಚಮಸಾಲಿ ಸಮಾಜದ ಮೂವರಿಗೆ ಸಚಿವ ಸ್ಥಾನ ನೀಡಿ. ಇಲ್ಲದಿದ್ದರೆ ನಾವು ನಿಮ್ಮ ಕೈ ಬಿಡಬೇಕಾಗುತ್ತೆ ಅಂತ ಹೇಳಿದ್ರು. ಕೂಡಲೇ ಕೂತಲ್ಲಿಂದ ಎದ್ದ ಯಡಿಯೂರಪ್ಪ, ನೀವು ಸಲಹೆ ನೀಡಿ ತಲೆಬಾಗುತ್ತೇನೆ. ಹೆದರಿಸಿದ್ರೆ ಆಗಲ್ಲ ಎಂದು ಸಿಟ್ಟಾದರು.
ನಾನು ಕುರ್ಚಿಗೆ ಅಂಟಿಕೊಂಡಿಲ್ಲ ರಾಜೀನಾಮೆ ನೀಡಲು ಸಿದ್ದ. ನನ್ನ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಿ. ಎಲ್ಲ ಸ್ವಾಮೀಜಿಗಳನ್ನ ಒಟ್ಟಿಗೆ ಸೇರಿಸ್ತೇನೆ, ನನಗೆ ನೀವು ಸಲಹೆ ಕೊಡಿ ಎಂದರು.