Monday, December 23, 2024

ಬಾಲಿವುಡ್​ ನಟ ಅಜಯ್​​ ದೇವಗನ್​ ಜೊತೆ ಧೋನಿ !

ಮುಂಬೈ: ಕ್ರಿಕೆಟ್​ನಿಂದ ದೂರ ಉಳಿದಿರುವ ಟೀಮ್​ ಇಂಡಿಯಾ ಮಾಜಿ ಕ್ಯಾಪ್ಟನ್​ ಎಂ.ಎಸ್​.ಧೋನಿ ಮತ್ತೆ ಮೈದಾನಕ್ಕಿಳಿಯುದನ್ನು ನೋಡಲು ಇಡೀ ವಿಶ್ವವೇ ಕಾಯುತ್ತಿದೆ. 2019ರ ವಿಶ್ವಕಪ್​ ನಂತರ ಧೋನಿ ಕ್ರಿಕೆಟ್​ನಿಂದ ಕೊಂಚ ದೂರವಾಗಿದ್ದಾರೆ. ಅಲ್ಲದೆ ತಮ್ಮ ಕಾಮ್​ಬ್ಯಾಕ್​ ಬಗ್ಗೆ ಮಾಹಿತಿಯನ್ನು ಸಹ ನೀಡುತ್ತಿಲ್ಲ. ಸದ್ಯ ಬಾಲಿವುಡ್​ ನಟ ಅಜಯ್​ ದೇವಗನ್​ ಜೊತೆ ಕಾಣಿಸಿಕೊಂಡಿರುವ ಧೋನಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.

ತಮ್ಮ 100 ನೇ ಸಿನಿಮಾ ‘ತನ್​ಹಾಜಿ’ ಪ್ರಮೋಶನ್​ನಲ್ಲಿ ಬ್ಯೂಸಿಯಾಗಿರುವ ಅಜಯ್​ ದೇವಗನ್​​, ಪ್ರಚಾರದ ವೇಳೆ ಧೋನಿಯನ್ನು ಭೇಟಿಯಾಗಿ ಮಾತನಾಡಿದ್ದಾರೆ. ಅಲ್ಲದೆ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಂಚಿಕೊಂಡಿದ್ದಾರೆ. ಕ್ರಿಕೆಟ್​ ಹಾಗೂ ಬಾಲಿವುಡ್​ ಎಲ್ಲರನ್ನೂ ಒಂದುಗೂಡಿಸುವ ದೇಶದ ಎರಡು ಧರ್ಮಗಳು ಎಂದು ಅಜಯ್​ ದೇವಗನ್​ ಹೇಳಿದ್ದಾರೆ.

RELATED ARTICLES

Related Articles

TRENDING ARTICLES