Sunday, December 22, 2024

ಗೆಲುವಿನ ಖಾತೆ ತೆರೆದ ಬಿಜೆಪಿ : ಯಲ್ಲಾಪುರದಲ್ಲಿ ಶಿವರಾಮ್​ ಹೆಬ್ಬಾರ್​ಗೆ​ ಭರ್ಜರಿ ಗೆಲುವು

ಯಲ್ಲಾಪುರ : ಅನರ್ಹ ಶಾಸಕರ ಹಾಗೂ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸುವ ಚುನಾವಣೆ ಎಂದೇ ಬಿಂಬಿತವಾಗಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಖಾತೆಯನ್ನು ತೆರೆದಿದೆ. ಯಲ್ಲಾಪುರ ವಿಧಾಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್​ನಿಂದ ಭೀಮಣ್ಣ ನಾಯ್ಕ್ ಹಾಗೂ ಜೆಡಿಎಸ್​ನಿಂದ ಎ. ಚೈತ್ರಾಗೌಡ ಕಣದಲ್ಲಿದ್ದರು. ಇನ್ನುಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ 17 ಮಂದಿ ಶಾಸಕರಲ್ಲಿ ಶಿವರಾಮ್ ಹೆಬ್ಬಾರ್ ಕೂಡ ಒಬ್ಬರಾಗಿದ್ದರು. ಬಿಜೆಪಿಯಿಂದ ಕಣಕ್ಕಿಳಿದು ಮತ್ತೆ ವಿಧಾನಸಭೆ ಪ್ರವೇಶಿಸಿದ್ದಾರೆ.

ಬೈ ಎಲೆಕ್ಷನ್ ರಿಸಲ್ಟ್ : ಅರ್ಹತಾ ಪರೀಕ್ಷೆಯಲ್ಲಿ ಯಾರು ಪಾಸ್? ಯಾರು ಫೇಲ್? ಇಲ್ಲಿದೆ ಕ್ಷಣ ಕ್ಷಣದ ಅಪ್​ಡೇಟ್ಸ್

RELATED ARTICLES

Related Articles

TRENDING ARTICLES