Wednesday, January 22, 2025

ನನ್ನ ಸೆಲೆಬ್ರಿಟಿಗಳನ್ನು ಕೆಣಕಲು ಬರಬೇಡಿ ಅಂದಿದ್ದೇಕೆ ದರ್ಶನ್..?

ಬೆಂಗಳೂರು : ಚಿತ್ರರಂಗದಲ್ಲಿ ಬಹಳಷ್ಟು ರಾಜಕೀಯ ಇದೆ. ಸ್ನೇಹಿತರಂತಿದ್ದು, ಗೊತ್ತೇ ಆಗದಂತೆ ಬೆನ್ನಿಗೆ ಚೂರಿ ಹಾಕ್ತಾರೆ ಎಂಬ ನಟ ಅಭಿನಯ ಚಕ್ರವರ್ತಿ ಸುದೀಪ್ ಹೇಳಿಕೆ ವೈರಲ್ ಆಗ್ತಿರುವ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಟ್ವೀಟೊಂದನ್ನು ಮಾಡಿದ್ದಾರೆ. ದರ್ಶನ್ ಮಾಡಿರುವ ಟ್ವೀಟ್​ ಕೂಡ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದ್ದು, ಎಲ್ಲೆಡೆ ಹರಿದಾಡ್ತಿದೆ.
ಇಂದು ಮಧ್ಯಾಹ್ನ 12 ಗಂಟೆ 2 ನಿಮಿಷಕ್ಕೆ ದರ್ಶನ್ ಒಂದು ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್​ನಲ್ಲಿ ತನ್ನ ಫ್ಯಾನ್ಸ್ ಸುದ್ದಿ ಬರ್ಬೇಡಿ ಅಂತ ಎಚ್ಚರಿಕೆ ಕೊಟ್ಟಿದ್ದಾರೆ..!
”ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು – ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು/ಪ್ರಚೋದಿಸಲು ಬರದಿರಿ” ಅಂತ ಟ್ವೀಟ್ ಮಾಡಿದ್ದಾರೆ. ದರ್ಶನ್ ಹೀಗೆ ಯಾರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ರು ಅನ್ನೋದು ಸ್ಯಾಂಡಲ್​ವುಡ್​ನ ಸದ್ಯದ ಹಾಟ್​ ಟಾಪಿಕ್.

RELATED ARTICLES

Related Articles

TRENDING ARTICLES