ಬೆಂಗಳೂರು : ದಿಢೀರ್ ಅಂತ ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟಾಗಿದೆ. ಕಾಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ 12 ಮಂದಿ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ.
ಇತ್ತೀಚೆಗಷ್ಟೇ ವಿಜಯನಗರ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದರು. ಇಂದು 12 ಮಂದಿ ರಾಜೀನಾಮೆ ನೀಡಿದ್ದು, 13 ಮಂದಿ ಶಾಸಕರು ರಾಜೀನಾಮೆ ನೀಡಿದಂತಾಗಿದೆ. ಇದರಿಂದ ಮೈತ್ರಿ ಸರ್ಕಾರ ಆತಂಕಕ್ಕೆ ಸಿಲುಕಿದೆ. ರಾಮಲಿಂಗಾ ರೆಡ್ಡಿ (ಬಿಟಿಎಂ ಲೇಔಟ್), ಬೈರತಿ ಬಸವರಾಜ್ ( ಕೆ.ಆರ್.ಪುರಂ), ಮುನಿರತ್ನ (ರಾಜರಾಜೇಶ್ವರಿ ನಗರ), ಎಸ್.ಟಿ.ಸೋಮಶೇಖರ್ (ಯಶವಂತಪುರ), ನಾರಾಯಣ ಗೌಡ ( ಕೆ.ಆರ್.ಪೇಟೆ), ಹೆಚ್ ವಿಶ್ವನಾಥ್ (ಹುಣಸೂರು), ಗೋಪಾಲಯ್ಯ -(ಮಹಾಲಕ್ಷ್ಮಿ ಲೇಔಟ್), ರಮೇಶ್ ಜಾರಕಿಹೊಳಿ (ಗೋಕಾಕ್), ಮಹೇಶ್ ಕುಮಟಳ್ಳಿ (ಅಥಣಿ), ಬಿ.ಸಿ.ಪಾಟೀಲ್ (ಹಿರೇಕೆರೂರು ), ಪ್ರತಾಪ್ ಗೌಡ ಪಾಟೀಲ್ (ಮಸ್ಕಿ ), ಶಿವರಾಮ್ ಹೆಬ್ಬಾರ್ (ಯಲ್ಲಾಪುರ) ಇಂದು ರಾಜೀನಾಮೆ ನೀಡಿರುವ ಶಾಸಕರು.