ದೆಹಲಿ: ‘ಬಿಜೆಪಿಯವರೇನು ಸರ್ಕಾರ ಬೀಳಿಸೋದು? ಬೀಳೋಕೆ ನಾವೇ ರೆಡಿ ಇದ್ದೀವಿ’..! ಹೀಗಂತ ಸ್ಫೋಟಕ ಹೇಳಿಕೆ ನೀಡಿರುವುದು ಬೇರಾರು ಅಲ್ಲ, ಸ್ವತಃ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ವಿಶ್ವನಾಥ್ ಅವರು..!
ದೆಹಲಿಯಲ್ಲಿ ಪವರ್ ಟಿವಿ ಜೊತೆ ಮಾತನಾಡಿದ ಅವರು, ದೋಸ್ತಿ ಸರಕಾರ ಶೀಘ್ರದಲ್ಲೇ ಪತನ ಹೊಂದುವುದು ಖಚಿತ. ಯಾವ ಯಾವ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಸರಕಾದ ಬಗಗೆಗಿನ ಒಲವು ಕಡಿಮೆಯಾಗಿದೆ. ಶಾಸಕರ ಸಮಸ್ಯೆ ಬಗೆಹರಿಸುವ ಮನಸ್ಥಿತಿ ಮೈತ್ರಿ ನಾಯಕರಿಗಿಲ್ಲ. ರಾಜ್ಯದಲ್ಲಿ ಅರಾಜಕತೆ ನಡೀತಾ ಇದೆ. ಬಿಜೆಪಿಯವರು ಸರಕಾರ ಬೀಳಿಸ್ತೀನಿ ಅಂತಾರೆ. ಅವರೇನು ಬೀಳಿಸೋದು ಬೀಳೋಕೆ ನಾವೇ ರೆಡಿ ಇದ್ದೀವಲ್ಲ. ಯಾರು ಕೂಡ ಮನಸ್ಸಿಟ್ಟು ಕೆಲಸ ಮಾಡ್ತಿಲ್ಲ ಅಂತ ವಾಗ್ದಾಳಿ ನಡೆಸಿದ್ರು.
ಸಿದ್ದರಾಮಯ್ಯಗೆ ನನ್ನನ್ನು ಸಮನ್ವಯ ಸಮಿತಿಯಲ್ಲಿ ಸೇರಿಸಲು ಇಷ್ಟವಿಲ್ಲ. ಸಿದ್ದರಾಮಯ್ಯ ವೈಯಕ್ತಿಕ ಸೇಡನ್ನು ರಾಜ್ಯದ ಅಭಿವೃದ್ಧಿಗೆ ಬೆರೆಸಿರೋದು ಸರಿಯಲ್ಲ ಅಂದ ಅವರು, ಬಿಜೆಪಿ ನಾಯಕರ ಜೊತೆಗಿನ ಬ್ರೇಕ್ ಫಾಸ್ಟ್ ವಿಷಯಕ್ಕೆ ಯಾವ್ದೇ ಅರ್ಥ ಕಲ್ಲಿಸಬಾರದು ಅಂತ ಸ್ಪಷ್ಟಪಡಿಸಿದ್ರು.
ವಿಶ್ವನಾಥ್ ಅವರ ಹೇಳಿಕೆ ಭಾರಿ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ. ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಆನಂದ್ ಸಿಂಗ್ ರಾಜೀನಾಮೆಯ ಬೆನ್ನಲ್ಲೇ ವಿಶ್ವನಾಥ್ ಅವರ ಈ ಹೇಳಿಕೆ ದೋಸ್ತಿ ಪಕ್ಷಗಳ ಮುಖಂಡರಿಗೆ ಶಾಕ್ ನೀಡಿದೆ.