Saturday, April 27, 2024

ಕೊಹ್ಲಿ ಪಡೆ ಕೇಸರಿ ಜೆರ್ಸಿಯಲ್ಲಿ ಕಣಕ್ಕಿಳಿಯೋದು ಏಕೆ ಗೊತ್ತಾ?

ವರ್ಲ್ಡ್​​​ಕಪ್​ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿರುವ ವಿರಾಟ್​ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಇಂದು ಅತಿಥೇಯ ಇಂಗ್ಲೆಂಡ್ ಅನ್ನು ಎದುರಿಸಲು ಸಕಲ ಸನ್ನದ್ಧವಾಗಿದೆ.
ಬರ್ಮಿಂಗ್​ಹ್ಯಾಮ್​ನ ಎಜ್​​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯಲಿರುವ ಮ್ಯಾಚ್​ನಲ್ಲಿ ಕೊಹ್ಲಿ ಬಾಯ್ಸ್ ನ್ಯೂ ಲುಕ್​ನಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಇಷ್ಟು ದಿನ ಬ್ಲೂ ಜೆರ್ಸಿಯಲ್ಲಿ ಕಣಕ್ಕೆ ಇಳಿಯುತ್ತಿದ್ದ ಟೀಮ್ ಇಂಡಿಯಾ ಇಂದು ಕೇಸರಿ ಜೆರ್ಸಿಯಲ್ಲಿ ಆಡಲಿದೆ.
ಜರ್ಸಿ ಬದಲಾಯಿಸಿದ್ದೇಕೆ? : ಹೌದು ಟೀಮ್ ಇಂಡಿಯಾ ಇಂದಿನ ಮ್ಯಾಚ್​ನಲ್ಲಿ ತನ್ನ ಎಂದಿನ ನೀಲಿ ಬಣ್ಣದ ಜೆರ್ಸಿಯಲ್ಲಿ ಆಡುತ್ತಿಲ್ಲ. ಕೇಸರಿ ಬಣ್ಣದ ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಿದೆ. ಒನ್​ ಡೇ ಫಾರ್ ಚಿಲ್ಡ್ರನ್​ ಅನ್ನೋ ಐಸಿಸಿ ವಿಶೇಷ ಅಭಿಯಾನಕ್ಕೆ ಭಾರತ ಕೈ ಜೋಡಿಸಿದ್ದು, ಇಂದಿನ ಮ್ಯಾಚ್​ನಲ್ಲಿ ಬೇರೆ ಬಣ್ಣದ ಜೆರ್ಸಿಯಲ್ಲಿ ಆಡಲಿದೆ.  ಅಭಿಯಾನದ ಹಿನ್ನೆಲೆಯಲ್ಲಿ ತಂಡಗಳು ಒಂದು ಮ್ಯಾಚನ್ನು ಬೇರೆ ಜೆರ್ಸಿಯಲ್ಲಿ ಆಡಬೇಕು. ಭಾರತ ಕೇಸರಿ ಜೆರ್ಸಿಯನ್ನು ಆಯ್ಕೆ ಮಾಡಿಕೊಂಡಿದೆ. ಇಂದಿನ ಮ್ಯಾಚ್​ನಲ್ಲಿ ಮಾತ್ರ ಭಾರತ ಈ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದು, ಮುಂದಿನ ಮ್ಯಾಚ್​ಗಳಲ್ಲಿ ಎಂದಿನ ಬ್ಲೂ ಜೆರ್ಸಿಯಲ್ಲೇ ಮೈದಾನಕ್ಕೆ ಇಳಿಯಲಿದೆ. 

 

 

 

RELATED ARTICLES

Related Articles

TRENDING ARTICLES