ಕೊನೆಗೂ ಜೆಡಿಎಸ್ಗೆ ಹೊಸ ಸಾರಥಿ ತರಲು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ್ರು ನಿರ್ಧರಿಸಿದ್ದಾರೆ.
ಹೆಚ್.ವಿಶ್ವನಾಥ್ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅದನ್ನು ಇನ್ನೂ ಅಂಗೀಕರಿಸಿರಲಿಲ್ಲ. ಇದೀಗ ವಿಶ್ವನಾಥ್ ರಾಜೀನಾಮೆ ಅಂಗೀಕಾರ ಖಚಿತವಾಗಿದೆ.
ಜೆಪಿ ಭವನದಲ್ಲಿ ಮಾತನಾಡಿದ ದೇವೇಗೌಡ್ರು, ”3-4 ದಿನಗಳಲ್ಲಿ ಹೊಸ ರಾಜ್ಯಾಧ್ಯಕ್ಷರನ್ನ ನೇಮಕ ಮಾಡ್ತೀನಿ. ಆದ್ರೆ, ಹೆಚ್.ವಿಶ್ವನಾಥ್ ರಾಜೀನಾಮೆ ಅಂಗೀಕಾರ ಮಾಡಲ್ಲ. ಅವರಿಂದಲೇ ಅಧಿಕಾರ ಹಸ್ತಾಂತರ ಮಾಡಿಸ್ತೀವಿ ಅಂದಿದ್ದಾರೆ.
ಕುಮಾರಸ್ವಾಮಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಿ ಎಂಬ ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ದೇವೇಗೌಡ್ರು, ”ವಿಶ್ವನಾಥ್ ಅವರ ಹೇಳಿಕೆ ತಪ್ಪಲ್ಲ. ಆದ್ರೆ, ಒಬ್ಬರಿಗೆ ಒಂದೇ ಹುದ್ದೆ ಅಂತ ಪಕ್ಷದಲ್ಲಿ ನಿರ್ಧಾರವಾಗಿದೆ. ನಾನೇ ರಾಜೀನಾಮೆ ನೀಡಿ ಇಬ್ರಾಹಿಂ ಅವರಿಗೆ ಸ್ಥಾನ ಕೊಟ್ಟಿದ್ದೆ” ಎಂದಿದ್ದಾರೆ. ಹೀಗಾಗಿ ಜೆಡಿಎಸ್ಗೆ ಹೊಸ ಸಾರಥಿ ಯಾರಾಗ್ತಾರೆ ಅನ್ನೋದೇ ಈಗ ಕುತೂಹಲ ಮೂಡಿಸಿದೆ.
ಜೆಡಿಎಸ್ಗೆ ಹೊಸ ಸಾರಥಿ ತರಲು ಮುಂದಾದ್ರು ದೇವೇಗೌಡ್ರು..!
TRENDING ARTICLES