Thursday, January 2, 2025

‘ಮೈತ್ರಿ’ ಬಗ್ಗೆ ದೇವೇಗೌಡ್ರೇ ಸಿಡಿಸಿದ್ರು ಬಾಂಬ್​..! ಹೆಚ್​ಡಿಡಿ ಮಾತಿಗೆ ‘ದೋಸ್ತಿ’ ಶೇಕ್​..!

ಬೆಂಗಳೂರು : ಕಾಂಗ್ರೆಸ್​ ಅತೃಪ್ತರು ತಣ್ಣಗಾಗುವಷ್ಟರಲ್ಲೇ ದೇವೇಗೌಡರು ‘ಮೈತ್ರಿ’ ಬಗ್ಗೆ ಬಾಂಬ್​ ಸಿಡಿಸಿದ್ದಾರೆ. ಮಾಜಿ ಪ್ರಧಾನಿಗಳ ಮಾತಿಗೆ ದೋಸ್ತಿ ಮುಖಂಡರು ಶೇಕ್ ಆಗಿದ್ದಾರೆ..!
ಬೆಂಗಳೂರಲ್ಲಿ ಮಾತನಾಡಿರೋ ಹೆಚ್​ಡಿಡಿ, ” ರಾಜ್ಯದಲ್ಲಿ ದೋಸ್ತಿ ಸರ್ಕಾರ ಎಷ್ಟು ದಿನಗಳ ಕಾಲ ಇರುತ್ತೋ ಗೊತ್ತಿಲ್ಲ. ಮಧ್ಯಂತರ ಚುನಾವಣೆ ಬಗ್ಗೆ ಯಾವುದೇ ಸಂಶಯವೇ ಬೇಡ. ಎಲ್ಲವೂ ಕಾಂಗ್ರೆಸ್​ ಮುಖಂಡರ ಕೈಯಲ್ಲೇ ಇದೆ” ಅಂದಿದ್ದಾರೆ.
ಲೋಕ ಸಮರದ ನಂತ್ರ ಕಾಂಗ್ರೆಸ್​ ಹೈಕಮಾಂಡ್​ ಕೊಂಚ ಶಕ್ತಿ ಕಳೆದುಕೊಂಡಿದೆ. ಜೆಡಿಎಸ್ ಜೊತೆ ಹೊರಟ್ರೆ ಕಾಂಗ್ರೆಸ್ ಪಕ್ಷ ಕುಂದುತ್ತೆ ಅನ್ನೋ ಸಂಕಟ ಇದೆ. ಹಾಗಾಗಿಯೇ ಜೆಡಿಎಸ್​ ಪಾಲಿನ ಒಂದು ಮಂತ್ರಿ ಸ್ಥಾನವನ್ನೂ ತೆಗೆದುಕೊಂಡಿದ್ದಾರೆ . ಎಲ್ಲಾ ಸಹಿಸ್ಕೊಂಡು ಹೋಗ್ತಿದ್ದೇನೆ. ಲೋಕ ಸಮರದ ಸೋಲಿಗೆ ನಾವು​ ಕಾರಣವಾದ್ರೆ ಬಹಿರಂಗವಾಗಿ ಹೇಳಲಿ ಅಂತ ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದಾರೆ.
ತುಮಕೂರು ಸೋಲಿನ ಬಗ್ಗೆಯೂ ಕಾಂಗ್ರೆಸ್​ಗೆ ತಿರುಗೇಟು ನೀಡಿದ ದೇವೇಗೌಡ್ರು, ”ಕಾಂಗ್ರೆಸ್​ ಹಾಲಿ ಸಂಸದರ ಕ್ಷೇತ್ರವನ್ನು ಬೇಡ ಎಂದು ನಾನು ಹೇಳಿದ್ದೆ. ಮೈಸೂರು ಉಳಿಸಿಕೊಳ್ಳಲು ತುಮಕೂರು ಕ್ಷೇತ್ರವನ್ನು ನಮಗೆ ಬಿಟ್ಟುಕೊಟ್ರು. ಮೈತ್ರಿ ಸರ್ಕಾರ ಮಾಡ್ಲೇಬೇಕು ಅಂತ ನನಗೇನೂ ಇರಲಿಲ್ಲ. ಯಡಿಯೂರಪ್ಪ ಸಿಎಂ ಆಗಬಾರ್ದು ಅಂತಾ ಕಾಂಗ್ರೆಸ್​ನವರು ಓಡೋಡಿ ಬಂದ್ರು. ಎಲ್ಲ ಸಾಧಕ ಬಾಧಕ ಚರ್ಚೆ ಮಾಡದೇ ಕಾಂಗ್ರೆಸ್​ ಮುಖಂಡರು ಸರ್ಕಾರ ರಚಿಸಿದ್ರು” ಅಂತ ಕಾಂಗ್ರೆಸ್​ ಹಾಗೂ ಸಿದ್ದರಾಮಯ್ಯ ಅವರ ವಿರುದ್ಧ ಗುಡುಗಿದ್ದಾರೆ.
ಕುಮಾರಸ್ವಾಮಿ ಅವರನ್ನೇ ಸಿಎಂ ಮಾಡಿ ಎಂದು ಕಾಂಗ್ರೆಸ್​ನವರು ಒತ್ತಾಯಿಸಿದ್ರು. ಕಾಂಗ್ರೆಸ್​ ಪಕ್ಷಕ್ಕೆ ಸರ್ಕಾರ ಮುನ್ನಡೆಸುವ ಮನಸ್ಸು ಇದೆಯೋ ಇಲ್ವೋ ಗೊತ್ತಿಲ್ಲ ಅಂತ ಅಸಮಧಾನ ಹೊರ ಹಾಕಿದ್ರು.

RELATED ARTICLES

Related Articles

TRENDING ARTICLES