Sunday, April 28, 2024

ಇಂಟರ್​ನ್ಯಾಷನಲ್ ಕ್ರಿಕೆಟ್​​ಗೆ ಗುಡ್​​​ಬೈ ಹೇಳಿದ ಯುವರಾಜ್​ ಸಿಂಗ್..!

ಮುಂಬೈ: 2011ರ ವರ್ಲ್ಡ್​ಕಪ್​ ಹೀರೊ ಯುವರಾಜ್​ ಸಿಂಗ್​ ಇಂಟರ್​​ನ್ಯಾಷನಲ್ ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ದಾರೆ.  ಕ್ಯಾನ್ಸರ್ ನಡುವೆಯೂ 2011ರ ವಿಶ್ವಕಪ್​ ನಲ್ಲಿ ಆಲ್​​ರೌಂಡ್​ ಆಟವಾಡಿ ಸರಣಿ ಶ್ರೇಷ್ಠ ಗೌರವಕ್ಕೆ ಯುವಿ ಪಾತ್ರರಾಗಿದ್ದರು. ಕ್ಯಾನ್ಸರ್​ನಿಂದ ಗುಣಮುಖರಾಗಿ ಟೀಮ್​ ಇಂಡಿಯಾಕ್ಕೆ ಮರಳಿದರೂ ಹೆಚ್ಚಿನ ಅವಕಾಶಗಳು ಅವರಿಗೆ ಸಿಗಲಿಲ್ಲ. 2017ರ ಜೂನ್​​ 30ರಂದು ಒಡಿಐ ಯುವಿ ಭಾರತದ ಪರ ಆಡಿದ ಕೊನೆಯ ಮ್ಯಾಚ್​.

37 ವರ್ಷದ ಯುವರಾಜ್​ ಸಿಂಗ್​ ಇಂದು ಮುಂಬೈನಲ್ಲಿ ಇಂಟರ್​ನ್ಯಾಷನಲ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಒಂದೇ ಓವರ್​ನಲ್ಲಿ 6 ಸಿಕ್ಸರ್​ ಬಾರಿಸಿದ್ದ ದಾಖಲೆಯನ್ನು ಯುವರಾಜ್​ ಹೊಂದಿದ್ದಾರೆ. ಭಾರತದ ಪರ ಒಟ್ಟು 40 ಟೆಸ್ಟ್​ ಪಂದ್ಯ, 304 ಒಡಿಐ, 58 ಟಿ20 ಇಂಟರ್​ನ್ಯಾಷನಲ್​ ಮ್ಯಾಚ್​ಗಳಲ್ಲಿ ಯುವರಾಜ್ ಆಡಿದ್ದಾರೆ.

ಟೆಸ್ಟ್​ ಪಂದ್ಯಗಳಲ್ಲಿ ಒಟ್ಟು 1,900 ರನ್ ಮತ್ತು 9 ವಿಕೆಟ್​​, ಏಕದಿನ ಪಂದ್ಯಗಳಲ್ಲಿ ಒಟ್ಟು 8,701 ರನ್ ಮತ್ತು 111 ವಿಕೆಟ್​​, ಟಿ-20 ಪಂದ್ಯಗಳಲ್ಲಿ 1,177 ರನ್​​, 28 ವಿಕೆಟ್ ಪಡೆದಿದ್ದಾರೆ. 2007ರಲ್ಲಿ ವರ್ಲ್ಡ್​ ಟಿ20ಯಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದರು. 2011ರಲ್ಲಿ ವಿಶ್ವಕಪ್​​​ ಗೆಲ್ಲಿಸಿ ಕೊಟ್ಟಿದ್ದ ಹಿರಿಮೆಯೂ ಯುವರಾಜ್​ ಸಿಂಗ್​ಗೆ ಸಲ್ಲುತ್ತದೆ.

ಸಿಕ್ಸರ್​ ಸಿಂಗ್​ ಅಂತಾನೇ ಫೇಮಸ್ಸಾಗಿರೋ ಯುವರಾಜ್​ ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 6 ಬಾಲ್​ಗೆ ಆರು ಸಿಕ್ಸ್​ ಸಿಡಿಸಿ ಫೇಮಸ್ಸಾಗಿದ್ರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ವಿಶ್ವಕಪ್​ನ ಮೊದಲ ಆವೃತ್ತಿಯಲ್ಲೇ ಯುವಿ ಆ ಸಾಧನೆ ಮಾಡಿದ್ರು. 2007ರ ಸೆಪ್ಟೆಂಬರ್​ 19ರಂದು ಇಂಗ್ಲೆಂಡ್​ ವಿರುದ್ಧ ಆರು ಬಾಲ್​ಗೆ ಆರು ಸಿಕ್ಸರ್​ ಸಿಡಿಸಿದ್ದ ಯುವ ಆಟದ ದೃಶ್ಯ ವೈಭವ ಕಣ್ಣಿಗೆ ಕಟ್ಟುವಂತಿದೆ.

RELATED ARTICLES

Related Articles

TRENDING ARTICLES