Wednesday, November 13, 2024

13ರ ತನಕ ರಾಜ್ಯದಲ್ಲಿ ಶೋಕಾಚರಣೆ: ಸಂಪುಟ ವಿಸ್ತರಣೆ ಮಂದೂಡಿಕೆ ?

ಬೆಂಗಳೂರು: ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಜೂನ್​. 13ರ ತನಕ ರಾಜ್ಯದಲ್ಲಿ ಶೋಕಾಚರಣೆ ಜಾರಿಯಲ್ಲಿರಲಿದೆ. ಶೋಕಾಚರಣೆ ಹಿನ್ನೆಲೆ ಸಂಪುಟ ವಿಸ್ತರಣೆ ಮುಂದೂಡಲಾಗಿದೆ. ಹಿರಿಯ ಸಾಹಿತಿ ಗಿರೀಶ್‌ ಕಾರ್ನಾಡ್‌ ವಿಧಿವಶರಾಗಿದ್ದು, ಸರ್ಕಾರ ಮೂರು ದಿನ ಶೋಕಾಚರಣೆ ಘೋಷಿಸಿದೆ. ಸಿಎಂ ಹೆಚ್​. ಡಿ. ಕುಮಾರಸ್ವಾಮಿ ಜೂನ್​​​ 13ರಂದು ಸಂಪುಟ ವಿಸ್ತರಣೆಗೆ ಅವಕಾಶ ಕೋರಿದ್ದರು. ರಾಜ್ಯಪಾಲರ ಬಳಿ ಸಮಯವನ್ನೂ ನಿಗದಿಪಡಿಸಿದ್ದರು. ಆದರೆ ಜೂನ್ 13ರವರೆಗೂ ರಾಜ್ಯದಲ್ಲಿ ಶೋಕಾಚರಣೆ ಜಾರಿಯಾಗಿರುವುದರಿಂದ ಸಂಪುಟ ವಿಸ್ತರಣೆಗೆ ವಿಘ್ನವಾಗಿದೆ.

RELATED ARTICLES

Related Articles

TRENDING ARTICLES