ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಹಿರಿಯ ಕಾಂಗ್ರೆಸ್ಸಿಗರ ಮಧ್ಯೆ ಸಂಧಾನ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮ್ಮುಖದಲ್ಲೇ ಕೆ.ಜೆ. ಜಾರ್ಜ್ ಮತ್ತು ಹೆಚ್.ಕೆ. ಪಾಟೀಲ್ ಸಂಧಾನ ನಡೆದಿದೆ. ಇಬ್ಬರಿಗೂ ಕೆಪಿಸಿಸಿ ಕಚೇರಿಗೆ ಬರುವಂತೆ ದಿನೇಶ್ ಗುಂಡೂರಾವ್ ಸೂಚಿಸಿದ್ದರು.
ಜಿಂದಾಲ್ ಭೂಮಿ ನೀಡಿರುವುದಕ್ಕೆ ಹೆಚ್.ಕೆ. ಪಾಟೀಲ್ ಬಹಿರಂಗವಾಗಿ ಕಿಡಿಕಾರಿದ್ದರು. ಪಾಟೀಲ್ ಅವರ ಬಹಿರಂಗ ಆಕ್ಷೇಪಕ್ಕೆ ಕೆ.ಜೆ. ಜಾರ್ಜ್ ಬೇಸರ ತೋಡಿಕೊಂಡಿದ್ದರು. ಇದೀಗ ದಿನೇಶ್ ಗುಂಡೂರಾವ್ ಅವರು ಇಬ್ಬರನ್ನೂ ಮುಖಾಮುಖಿ ಕೂರಿಸಿ ಗೊಂದಲ ನಿವಾರಣೆಗೆ ಮುಂದಾಗಿದ್ದಾರೆ. ಜಿಂದಾಲ್ ಕಂಪನಿಗೆ ಸರ್ಕಾರ ಭೂಮಿ ಪರಭಾರೆ ವಿಚಾರವಾಗಿ ಸಚಿವ ಜಾರ್ಜ್ ಮತ್ತು ಹೆಚ್. ಕೆ. ಪಾಟೀಲ್ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದಾರೆ. ಜಿಂದಾಲ್ಗೆ ಭೂಮಿ ನೀಡಿರುವ ಬಗ್ಗೆ ಜಾರ್ಜ್ ವಿವರಣೆಯನ್ನ ನೀಡಲಿದ್ದು, ಸಚಿವ ಹೆಚ್. ಕೆ. ಪಾಟೀಲ್ ಅವರಿಗಿರುವ ಗೊಂದಲ ನಿವಾರಣೆಗೆ ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ.