ರಾಜ್ಯದ 61 ನಗರ ಸ್ಥಳೀಯ ಸಂಸ್ಥೆಗಳಿಗೆ ಬುಧವಾರ ಚುನಾವಣೆ ನಡೆದಿತ್ತು. ಅದರ ಫಲಿತಾಂಶ ಇದೀಗ ಹೊರ ಬಿದ್ದಿದೆ.
ನಗರ ಸಭೆ ಫಲಿತಾಂಶ : ರಾಜ್ಯದ 7 ನಗರಸಭೆಗಳ ಪೈಕಿ 4 ನಗರಸಭೆಗಳು ಅತಂತ್ರವಾಗಿವೆ. ಹಿರಿಯೂರಿನಲ್ಲಿ ಒಟ್ಟು 31 ಸ್ಥಾನಗಳಲ್ಲಿ ಬಿಜೆಪಿ 6, ಕಾಂಗ್ರೆಸ್ 13, ಜೆಡಿಎಸ್ 3, ಇತರೆ 9 ಸ್ಥಾನ ಪಡೆದಿವೆ.
ಹರಿಹರದಲ್ಲಿ 31 ಸ್ಥಾನಗಳಲ್ಲಿ ಬಿಜೆಪಿ 5, ಕಾಂಗ್ರೆಸ್ 10, ಜೆಡಿಎಸ್ 14, ಇತರೆ 2 ಸ್ಥಾನಗಳನ್ನು, ಶಿಡ್ಲಘಟ್ಟದ 31 ಸ್ಥಾನಗಳಲ್ಲಿ ಬಿಜೆಪಿ 2, ಕಾಂಗ್ರೆಸ್ 13, ಜೆಡಿಎಸ್ 10, ಇತರೆ 6 ಸ್ಥಾನ ಪಡೆದಿವೆ. ತಿಪಟೂರಲ್ಲಿ 31 ಸ್ಥಾನಗಳ ಪೈಕಿ ಬಿಜೆಪಿ 11, ಕಾಂಗ್ರೆಸ್ 9, ಜೆಡಿಎಸ್ 5, ಇತರೆ 6 ಸ್ಥಾನಗಳನ್ನು, ನಂಜನಗೂಡಲ್ಲಿ 31 ಸ್ಥಾನಗಳಲ್ಲಿ ಬಿಜೆಪಿ 15, ಕಾಂಗ್ರೆಸ್ 10, ಜೆಡಿಎಸ್ 3, ಇತರೆ 3, ಬಸವ ಕಲ್ಯಾಣದಲ್ಲಿ 31 ಸ್ಥಾನಗಳಲ್ಲಿ ಬಿಜೆಪಿ 5, ಕಾಂಗ್ರೆಸ್ 18, ಜೆಡಿಎಸ್ 3, ಇತರೆ 5,ಶಹಾಪುರದಲ್ಲಿ 31 – ಬಿಜೆಪಿ 13, ಕಾಂಗ್ರೆಸ್ 16, ಎಸ್ಡಿಪಿಐ 2 ಸ್ಥಾನಗಳನ್ನು ಪಡೆದಿದೆ.
ಪುರಸಭೆ ಫಲಿತಾಂಶ : ಇನ್ನು ರಾಜ್ಯದ 30 ಪುರಸಭೆಗಳಲ್ಲಿ ಎಲೆಕ್ಷನ್ ನಡೆದಿತ್ತು. ಅವುಗಳ ಪೈಕಿ 6 ಪುರಸಭೆಗಳಲ್ಲಿ ಬಿಜೆಪಿಗೆ ಬಹುಮತ ಬಂದಿದೆ. 12 ಪುರಸಭೆಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಎರಡು ಪುರಸಭೆಗಳಲ್ಲಿ ಜೆಡಿಎಸ್ ಜಯಭೇರಿ ಬಾರಿಸಿದೆ. ಬರೋಬ್ಬರಿ 10 ಪುರಸಭೆಗಳಲ್ಲಿ ಅತಂತ್ರ ಫಲಿತಾಂಶ ಬಂದಿದೆ.
ಪಟ್ಟಣ ಪಂಚಾಯತಿ : ರಾಜ್ಯದ 19 ಪಟ್ಟಣ ಪಂಚಾಯತ್ಗಳಲ್ಲಿ 8ರಲ್ಲಿ ಬಿಜೆಪಿ, 3ರಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಬರೋಬ್ಬರಿ 8 ಪಟ್ಟಣ ಪಂಚಾಯತಿಗಳಲ್ಲಿ ಅತಂತ್ರ ಫಲಿತಾಂಶ ಬಂದಿದೆ.
ಬಿಬಿಎಂಪಿ ರಿಸೆಲ್ಟ್ : ಬೆಂಗಳೂರು ಮಹಾನಗರ ಪಾಲಿಕೆಯ ಕಾವೇರಿಪುರ ವಾರ್ಡ್ ಮತ್ತು ಸಗಾಯಪುರಂ ವಾರ್ಡ್ ಗೆ ನಡೆದ ಮರು ಚುನಾವಣೆ ಫಲಿತಾಂಶ ಕೂಡ ಹೊರ ಬಿದ್ದಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ತಲಾ 1ರಲ್ಲಿ ಗೆಲುವು ಸಾಧಿಸಿವೆ. ಕಾವೇರಿಪುರ ವಾರ್ಡ್ನಲ್ಲಿ ಬಿಜೆಪಿ ಅಭ್ಯರ್ಥಿ ಪಲ್ಲವಿ ಚನ್ನಪ್ಪ, ಸಗಾಯಪುರ ವಾರ್ಡ್ನಲ್ಲಿ ಕಾಂಗ್ರೆಸ್ನ ಪಳನಿ ಅಮ್ಮಾಳ್ ಗೆಲವು ಸಾಧಿಸಿದ್ದಾರೆ.
ಕಾವೇರಿಪುರ ವಾರ್ಡ್ ಹಾಗೂ ಸಗಾಯಪುರಂ ವಾರ್ಡ್ ಫಲಿತಾಂಶ ಹೊರಹೊಮ್ಮಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 1 ಕ್ಷೇತ್ರದಲ್ಲಿ ಜಯಗಳಿಸಿದೆ.