Thursday, November 7, 2024

ಮೋದಿ ಸಂಪುಟ ಸೇರಲಿರೋ ಘಟಾನುಘಟಿ ನಾಯಕರು ಯಾರ‍್ಯಾರು?

ನರೇಂದ್ರ ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿದೆ. ಮೋದಿ ಸಂಪುಟದಲ್ಲಿ ಯಾರಿಗೆಲ್ಲಾ ಸಿಗುತ್ತೆ ಚಾನ್ಸ್​​ ಅನ್ನೋ ಕುತೂಹಲಕ್ಕೆ ತಕ್ಕಮಟ್ಟಿಗೆ ಬ್ರೇಕ್ ಬಿದ್ದಿದೆ.
ಕರ್ನಾಟಕದಿಂದ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಸದಾನಂದ ಗೌಡ, ಧಾರವಾಡ ಸಂಸದ ಪ್ರಹ್ಲಾದ್​ ಜೋಶಿ, ಬೆಳಗಾವಿ ಸಂಸದ ಸುರೇಶ್ ಅಂಗಡಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸೋದು ಪಕ್ಕಾ ಆಗಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯೂ ಮೋದಿ ಸಂಪುಟದಲ್ಲಿ ಸಚಿವರಾಗಲಿದ್ದಾರೆ.
ಇನ್ನುಳಿದಂತೆ ಅರ್ಜುನ್ ರಾಮ್‌ ಮೆಘ್ವಾಲ್, ಜಿತೇಂದ್ರ ಸಿಂಗ್ ಪಿಯೂಷ್‌ ಗೋಯಲ್, ಕಿಶನ್ ರೆಡ್ಡಿ, ಆರ್‌ಪಿಐನ ರಾಮದಾಸ್‌ ಅಠವಾಳೆಗೆ ಚಾನ್ಸ್‌ . ಎಲ್‌ಜೆಪಿಯ ರಾಮ್‌ ವಿಲಾಸ್‌ ಪಾಸ್ವಾನ್ ಲಕ್ . ಧರ್ಮೇಂದ್ರ ಪ್ರಧಾನ್, ಪ್ರಕಾಶ್ ಜಾವ್ಡೇಕರ್, ರವಿಶಂಕರ್ ಪ್ರಸಾದ್, ಸ್ಮೃತಿ ಇರಾನಿ. ರಾಜನಾಥ್ ಸಿಂಗ್, ಡಾ.ಜಿತೇಂದ್ರ ಸಿಂಗ್ . ಹರ್ ಸಿಮ್ರತ್ ಕೌರ್, ಬಾಬುಲ್ ಸುಪ್ರಿಯೋ, ಮುಕ್ತಾರ್ ಅಬ್ಬಾಸ್ ನಖ್ವಿ, ಕೃಷ್ಣಲಾಲ್ ಜೋಷಿ, ಕಿರಣ್ ರಿಜಿಜು, ನಿತ್ಯನಂದ ರಾಯ್‌, ಪುರುಷೋತ್ತಮ್ ರೂಪಾಲ್​, ನರೇಂದ್ರಸಿಂಗ್ ತೋಮರ್, ಸಾಧ್ವಿ ನಿರಂಜನ್ ಜ್ಯೋತಿ, ತಾವರ್‌ ಚಂದ್‌ ಗೆಹ್ಲೋಟ್, ನಿತಿನ್ ಗಡ್ಕರಿ, ಕಿಶನ್‌ ಪಾಲ್‌ ಗುರ್ಜರ್, ಸಂತೋಷ್‌ ಗಂಗ್ವಾರ್ ಮೋದಿ ಸಂಪುಟ ಸೇರಲಿದ್ದಾರೆ

RELATED ARTICLES

Related Articles

TRENDING ARTICLES