ತುಮಕೂರು : ನನ್ನ ವಿರುದ್ಧ ಕೂಗಿದ್ರೆ ನಾಲಿಗೆ ಸೀಳ್ತೀನಿ ಅಂತ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ಗರಂ ಆಗಿದ್ದಾರೆ. ತುಮಕೂರಿನ ಟೌನ್ ಹಾಲ್ನಲ್ಲಿ ಕಾಂಗ್ರೆಸ್ನ ಕೆಲವು ಕಾರ್ಯಕರ್ತರು ಕೆ.ಎನ್ ರಾಜಣ್ಣ ಅವ್ರ ವಿರುದ್ಧ ಪ್ರತಿಭಟನೆ ನಡೆಸ್ತಾ ಇದ್ರು. ರಾಜಣ್ಣ ಅವರಿಂದಾಗಿಯೇ ಮೈತ್ರಿ ಅಭ್ಯರ್ಥಿ ದೇವೇಗೌಡ್ರಿಗೆ ಸೋಲಾಗಿದೆ ಅಂತ ಪ್ರತಿಭಟನೆ ನಡೆಸ್ತಾ ಇದ್ದ ‘ಕೈ’ ಕಾರ್ಯಕರ್ತರು ರಾಜಣ್ಣ ಅಲ್ಲಿಗೆ ಬರ್ತಾರೆ ಅನ್ನೋ ವಿಷಯ ತಿಳೀತಾ ಇದ್ದಂತೆ ಜೂಟ್ ಹೇಳಿದ್ರು.
ರಾಜಣ್ಣ ಆಗಮಿಸುತ್ತಿರೋ ವಿಷಯ ತಿಳಿದ ಪ್ರತಿಭಟನಾಕಾರರು ಶಾಮಿಯಾನ, ಅಂಬೇಡ್ಕರ್ ಫೋಟೋ ಎಲ್ಲಾ ಬಿಟ್ಟು ಕಾಲ್ಕಿತ್ತಿದ್ದಾರೆ. ಬಳಿಕ ಪ್ರತಿಭಟನಾ ಸ್ಥಳದ ಸಮೀಪವೇ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎನ್ ರಾಜಣ್ಣ, ”ನನ್ನ ವಿರುದ್ಧ ಧಿಕ್ಕಾರ ಕೂಗಿದ್ರೆ ನಾಲಿಗೆ ಸೀಳ್ತೀನಿ. ಯಾರೇ ಆದ್ರು ಬಿಡಲ್ಲ. ದೊಡ್ಡವರಾಗಲಿ, ಚಿಕ್ಕವರಾಗಲಿ ನನ್ನ ವಿರುದ್ಧ ಮಾತಾಡಿದ್ರೆ ನಾಲಿಗೆ ಸೀಳುತ್ತೇನೆ” ಅಂದ್ರು.
ತಮ್ಮ ವಿರುದ್ಧ ಮಾತಾಡಿದ್ರೆ ನಾಲಿಗೆ ಸೀಳ್ತಾರಂತೆ ಕೆ.ಎನ್ ರಾಜಣ್ಣ..!
TRENDING ARTICLES