ಕಲಬುರಗಿ : 20 ರಿಂದ 25 ಶಾಸಕರು ಬಿಜೆಪಿಗೆ ಬರುವ ಲಕ್ಷಣ ಕಾಣುತ್ತಿದೆ ಅಂತ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ”20 ರಿಂದ 25 ಶಾಸಕರು ಬಿಜೆಪಿಗೆ ಬರುವ ಲಕ್ಷಣ ಕಾಣುತ್ತಿದೆ. ರೋಷನ್ ಬೇಗ್ ಸೇರಿದಂತೆ ಇತರರು ಬಿಜೆಪಿಗೆ ಸೇರ್ಪಡೆ ಸಾಧ್ಯತೆ ಇದೆ” ಎಂದರು.
”ರೋಷನ್ ಬೇಗ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಸುಭದ್ರ ಸರ್ಕಾರಕ್ಕಾಗಿ ಶಾಸಕರು ಬಿಜೆಪಿಗೆ ಬರಲಿದ್ದಾರೆ. ಕುಂದಗೋಳ, ಚಿಂಚೋಳಿಯಲ್ಲಿ ಬಿಜೆಪಿ ಗೆಲ್ಲುತ್ತೆ” ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರೋಷನ್ ಬೇಗ್ ಸೇರಿ 25 ಶಾಸಕರು ‘ಕೈ’ಗೆ ಗುಡ್ಬೈ ಹೇಳ್ತಾರಾ?
TRENDING ARTICLES