Sunday, December 22, 2024

ಸಚಿವ ಡಿ.ಕೆ. ಶಿವಕುಮಾರ್​ಗೆ ಪ್ರವಾಸದಲ್ಲೂ ನೆಮ್ಮದಿ ಇಲ್ಲ..!

ಬೆಂಗಳೂರು: ಚುನಾವಣೆ ಮುಗಿಸಿಕೊಂಡು ಆಸ್ಟ್ರೇಲಿಯಾಗೆ ಹೋಗಿದ್ದ ಸಚಿವ ಡಿ. ಕೆ. ಶಿವಕುಮಾರ್​ಗೆ ಅಲ್ಲಿಯೂ ನೆಮ್ಮದಿ ಇಲ್ಲದಂತಾಗಿದೆ. ಡಿಕೆಶಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್​ ಕರೆ ಮಾಡಿದ್ದು, “ಯಾವುದೇ ಕ್ಷಣದಲ್ಲಿ ವಾಪಸು ಬರಲು ಸಿದ್ಧರಾಗಿ” ಅಂತಾ ಸೂಚನೆ ನೀಡಿದ್ದಾರೆ. ಒಂದು ವೇಳೆ ಯಾವುದಾದರೂ ಬೆಳವಣಿಗೆ ಆದಲ್ಲಿ ವಾಪಸ್​ ಬರೋದಾಗಿ ಡಿಕೆಶಿ ಭರವಸೆ ನೀಡಿದ್ದಾರೆ.

ಎಕ್ಸಿಟ್ ಪೋಲ್​ನಿಂದ ಕೈ ಪಾಳಯದಲ್ಲಿ ಟೆನ್ಶನ್​ ಹೆಚ್ಚಿದೆ. ಎಕ್ಸಿಟ್ ಪೋಲ್​ ವರದಿ ಕೈ ಶಾಸಕರನ್ನ ಬಿಜೆಪಿ ಸೆಳೆಯುತ್ತೆ ಎನ್ನುವ ಆತಂಕ ಕಾಂಗ್ರೆಸ್​ ನಾಯಕರಲ್ಲಿ ಮನೆ ಮಾಡಿದೆ.

ರಮೇಶ್ ಜಾರಕಿಹೊಳಿ‌ ಕೈ ಶಾಸಕರನ್ನ ಸಂಪರ್ಕ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಶಾಸಕರನ್ನ ಹಿಡಿದಿಡುವಂತೆ ರಾಜ್ಯ ಕೈ ನಾಯಕರಿಗೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದಲ್ಲಿ ಇರೋ ಡಿಕೆಶಿಗೆ ವೇಣುಗೋಪಾಲ್ ಕರೆ ಮಾಡಿದ್ದಾರೆ. ಮೊನ್ನೆ ರಾಹುಲ್ ಗಾಂಧಿ ಅನುಮತಿ ಪಡೆದು ಕುಟುಂಬದ ಜತೆ ಡಿಕೆಶಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದಾರೆ.

RELATED ARTICLES

Related Articles

TRENDING ARTICLES