Monday, December 23, 2024

ಸಮೀಕ್ಷೆಗಳ ಪ್ರಕಾರ ಮಂಡ್ಯದಲ್ಲಿ ಗೆಲುವು ಯಾರಿಗೆ?

ಮಂಡ್ಯ: ದೇಶದಲ್ಲಿ ಲೋಕಸಭಾ ಚುನಾವಣೆ ಮುಗಿದಿದೆ. ಮೇ.23ಕ್ಕೆ ಬರಲಿರುವ ಫಲಿತಾಂಶವನ್ನು ಇಡೀ ದೇಶ ಎದುರು ನೋಡುತ್ತಿದೆ. ಈ ನಡುವೆ ಮತಗಟ್ಟೆ ಸಮೀಕ್ಷೆ ಕೂಡ ಹೊರಬಂದಿದ್ದು ಎನ್​ಡಿಎ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಅಂತ ಬಹುತೇಕ ಎಲ್ಲಾ ಸಮೀಕ್ಷೆಗಳು ಹೇಳುತ್ತಿವೆ.

ಇನ್ನು ರಾಜ್ಯದ 28 ಕ್ಷೇತ್ರಗಳ ಪೈಕಿ ಅತ್ಯಂತ ಹೆಚ್ಚು ಕುತೂಹಲ ಮೂಡಿಸಿರುವ ಕ್ಷೇತ್ರ ಮಂಡ್ಯ ಲೋಕಸಭಾ ಕ್ಷೇತ್ರ. ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ಅವರ ನಡುವಿನ ಹಣಾಹಣಿಯಿಂದಾಗಿ ಮಂಡ್ಯ ಕ್ಷೇತ್ರ ಇಡೀ ದೇಶದ ಗಮನ ಸೆಳೆದಿದೆ. ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಅವರ ನಡುವೆ ಭಾರಿ ಪೈಪೋಟಿ ಇದೆ. ಮತಗಟ್ಟೆ ಸಮೀಕ್ಷೆ ಕೂಡ ಅದನ್ನೇ ಹೇಳುತ್ತಿದೆ.

ರಾಜ್ಯದ ಚುನಾವಣೆಯ ಬಗ್ಗೆ 13 ಮತಗಟ್ಟೆ ಸಮೀಕ್ಷೆಗಳು ಪ್ರಕಟಗೊಂಡಿವೆ. ಈ 13 ಸಮೀಕ್ಷೆಗಳಲ್ಲಿ 8 ಸಮೀಕ್ಷೆಗಳ ಪ್ರಕಾರ ಮಂಡ್ಯದಲ್ಲಿ ನಿಖಿಲ್​ ಕುಮಾರಸ್ವಾಮಿ , 5 ಸಮೀಕ್ಷೆಗಳ ಪ್ರಕಾರ ಸುಮಲತಾ ಅಂಬರೀಶ್ ಗೆಲುವು ಸಾಧಿಸಲಿದ್ದಾರೆ.

RELATED ARTICLES

Related Articles

TRENDING ARTICLES