Monday, December 23, 2024

ಎಕ್ಸಿಟ್​ ಪೋಲ್​ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ..!

ಬೆಂಗಳೂರು: 17ನೇ ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್​ ಪ್ರಕಟವಾಗಿದ್ದು, ಬಹುತೇಕ ಸಮೀಕ್ಷೆಗಳೂ ಕರ್ನಾಟಕದಲ್ಲಿ ಕಮಲ ಅರಳೋದು ಪಕ್ಕಾ ಎಂದಿವೆ. ವಿವಿಧ ಸಂಸ್ಥೆಗಳ ಸರ್ವೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ ಬರಲಿದೆ ಅಂತ ತಿಳಿದು ಬಂದಿದೆ. ಪ್ರಮುಖ ಸರ್ವೇಗಳು ಕರ್ನಾಟಕ ರಿಸಲ್ಟ್​ ಬಗ್ಗೆ ಏನು ಹೇಳುತ್ತೆ ಎಂಬ ಮಾಹಿತಿ ಇಲ್ಲಿದೆ.

ಇಂಡಿಯಾ ಟುಡೇ ಆಕ್ಸಿಸ್ ಪ್ರಕಾರ ಬಿಜೆಪಿ 21-25 ಸ್ಥಾನಗಳನ್ನು ಗೆಲ್ಲಲಿದ್ದು, ಮೈತ್ರಿ 3-6, ಇತರೆ 01 ಸ್ಥಾನ ಗೆಲ್ಲಲಿದೆ. ಟುಡೇಸ್ ಚಾಣಕ್ಯ ಪ್ರಕಾರ ಬಿಜೆಪಿ-23, ಮೈತ್ರಿ 05 ಸ್ಥಾನ ಗೆಲ್ಲಲಿದ್ದು, ಇತರೆ ಪಕ್ಷಗಳಿಗಳಿಗೆ ಒಂದೂ ಸ್ಥಾನವೂ ಸಿಗುವುದಿಲ್ಲ. ನ್ಯೂಸ್‌-18-ಐಎಸ್‌ಪಿಒಎಸ್‌ ಪ್ರಕಾರ ಬಿಜೆಪಿ 20-23, ಕಾಂಗ್ರೆಸ್+ಜೆಡಿಎಸ್ 5-8, ಇತರೆ-00 ಸ್ಥಾನ ಗೆಲ್ಲಲಿದೆ. ಸಿ ವೋಟರ್ ಪ್ರಕಾರ ಬಿಜೆಪಿ-18, ಕಾಂಗ್ರೆಸ್+ಜೆಡಿಎಸ್-07, ಇತರೆ- 01 ಸ್ಥಾನ ಗೆಲ್ಲಲಿದೆ. ಇನ್ನು ಜನ್​ ಕೀ ಬಾತ್ ಪ್ರಕಾರ ಬಿಜೆಪಿ 18-20, ಕಾಂಗ್ರೆಸ್+ಜೆಡಿಎಸ್ 7-10, ಇತರೆ- 01 ಸ್ಥಾನ ಗೆಲ್ಲಲಿದೆ ಎಂದು ತಿಳಿದುಬಂದಿದೆ. ನ್ಯೂಸ್‌ಎಕ್ಸ್‌ ನೇತಾ ಪ್ರಕಾರ ಬಿಜೆಪಿ-15, ಕಾಂಗ್ರೆಸ್+ಜೆಡಿಎಸ್-12, ಇತರೆ- 01 ಸ್ಥಾನ ಗೆಲ್ಲಲಿದೆ. ರಿಪಬ್ಲಿಕ್‌-ಸಿ ವೋಟರ್ ಪ್ರಕಾರ ಬಿಜೆಪಿ-18, ಕಾಂಗ್ರೆಸ್+ಜೆಡಿಎಸ್- 7+2, ಇತರೆ- 01 ಹಾಗೂ ಟೈಮ್ಸ್‌ ನೌ+ವಿಎಂಆರ್ ಪ್ರಕಾರ ಬಿಜೆಪಿ- 21, ಕಾಂಗ್ರೆಸ್+ಜೆಡಿಎಸ್- 07, ಇತರೆ 0 ಸ್ಥಾನ ಗೆಲ್ಲಲಿದೆ.

RELATED ARTICLES

Related Articles

TRENDING ARTICLES