Monday, December 23, 2024

ಎಕ್ಸಿಟ್​ ಪೋಲ್​ ಬಗ್ಗೆ ರಾಜಕೀಯ ಮುಖಂಡರು ಏನಂತಾರೆ..?

ಬೆಂಗಳೂರು: ಮತಗಟ್ಟೆ ಸಮೀಕ್ಷೆ ಹೊರಬೀಳುತ್ತಿದ್ದಂತೆಯೇ ಹಲವು ರಾಜಕೀಯ ಮುಖಂಡರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಪಾಲಿಗೆ ಖುಷಿ ಕೊಟ್ಟಿವೆ. ಈ ಸಂಬಂಧ ರಿಯ್ಯಾಕ್ಟ್‌ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, “ರಾಜ್ಯದಲ್ಲಿ ಬಿಜೆಪಿಗೆ 22 ಸೀಟ್ ಫಿಕ್ಸ್ ಅಂತಾ ಹೇಳಿದ್ರು. ಈ ಹಿಂದೆಯೇ ಪ್ರಧಾನಿ ನರೇಂದ್ರ ಮೋದಿ ಎನ್‌ಡಿಎಗೆ 300 ಸ್ಥಾನ ಬರುತ್ತೆ ಅಂತಾ ಹೇಳಿದ್ರು. ಈಗ ಎಲ್ಲ ಸಮೀಕ್ಷೆಗಳೂ ಅದನ್ನೇ ಹೇಳುತ್ತಿವೆ. ಮೇ.23ರಂದು ಎಲ್ಲರಿಗೂ ವಾಸ್ತವದ ಚಿತ್ರಣ ಗೊತ್ತಾಗಲಿದೆ” ಎಂದಿದ್ದಾರೆ.

ಎಕ್ಸಿಟ್ ಪೋಲ್ ಸಮೀಕ್ಷೆ ಬಗ್ಗೆ ‘ಕೈ’ ನಾಯಕರ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿ, “ಸಮೀಕ್ಷೆಯನ್ನ ರಾಜಕೀಯ ನಾಯಕರು ನಡೆಸೋಕೆ ಬರುತ್ತಾ? ಪರಮೇಶ್ವರ್​ ಹೇಳಿಕೆಯಲ್ಲಿ ಹತಾಶೆ ಭಾವನೆ ಇದೆ. ರಾಜ್ಯದಲ್ಲಿ ತೀವ್ರ ಬರ, ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕು. 2-3 ವಾರದಲ್ಲಿ ಮಳೆಯಾಗದೇ ಇದ್ದರೆ ಪರಿಸ್ಥಿತಿ ಕಠಿಣ. ಹೀಗಾಗಿ ಬಿಜೆಪಿ ಕಚೇರಿಯಲ್ಲಿ ಹೋಮ ನಡೆಸಲಾಗುತ್ತಿದೆ” ಎಂದಿದ್ದಾರೆ.

ಎಕ್ಸಿಟ್ ಪೋಲ್ ಈಸ್ ನಾಟ್ ಎ ಎಕ್ಸಾಕ್ಟ್​ ಪೋಲ್: ಎಕ್ಸಿಟ್​ ಪೋಲ್​ನಲ್ಲಿ NDAಗೆ ಸ್ಪಷ್ಟ ಬಹುಮತ ಬಂದಿರುವ ಬಗ್ಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್​ ಪ್ರತಿಕ್ರಿಯೆ ನೀಡಿದ್ದು, ಎಕ್ಸಿಟ್​ ಪೋಲ್​ ಈಸ್​ ನಾಟ್​ ಎಕ್ಸಾಕ್ಟ್​ ಪೋಲ್​. ಮೂಡ್ ಸೆಟ್ ಮಾಡಿ ಇವಿಎಂಗಳನ್ನ ತಿರುಚುವ ಹುನ್ನಾರ ಮಾಡಲಾಗ್ತಿದೆ. ಚಂದ್ರಬಾಬು ನಾಯ್ಡು ಇದನ್ನ ಪದೇ ಪದೆ ಹೇಳ್ತಾನೇ ಇದ್ದಾರೆ. ಮೇ 23ರ ಬಳಿಕ ಸ್ಪಷ್ಟ ಚಿತ್ರಣ ಹೊರಬೀಳಲಿದೆ” ಎಂದಿದ್ದಾರೆ.

ಬಿಜೆಪಿ ಅಧ್ಯಕ್ಷರು ಸಮೀಕ್ಷೆ ಮಾಡಿಸಿದಂತಿದೆ: ಎಕ್ಸಿಟ್ ಪೋಲ್​ನಲ್ಲಿ NDAಗೆ ಸ್ಪಷ್ಟ ಬಹುಮತ ವಿಚಾರವಾಗಿ ಬೆಂಗಳೂರಿನಲ್ಲಿ ಡಿಸಿಎಂ ಪರಮೇಶ್ವರ್​​ ಪ್ರತಿಕ್ರಿಯೆ ನೀಡಿದ್ದಾರೆ. “ನನಗೆ ಎಕ್ಸಿಟ್​ ಪೋಲ್​ನಲ್ಲಿ ವಿಶ್ವಾಸ ಇಲ್ಲ. ಗ್ರೌಂಡ್ ರಿಯಾಲಿಟಿ ಬೇರೆ ರೀತಿಯಲ್ಲಿದೆ. ರಾಜ್ಯದಲ್ಲಿ ಮೈತ್ರಿ ಪಕ್ಷಗಳು 20 ಕ್ಷೇತ್ರದಲ್ಲಿ ಗೆಲ್ಲುತ್ತೆ. ಬಿಜೆಪಿ 18 ಸೀಟು ಬರುತ್ತೆ ಆದ್ರೆ ನಂಬಲು ಸಾಧ್ಯನಾ? ಸಮೀಕ್ಷೆಯನ್ನು ಬಿಜೆಪಿ ಅಧ್ಯಕ್ಷರು ಮಾಡಿಸಿದ ಹಾಗೇ ಇದೆ. ಫಲಿತಾಂಶದ ಬಳಿಕ ಎಲ್ಲಾ ಚಿತ್ರಣ ಗೊತ್ತಾಗುತ್ತೆ” ಎಂದಿದ್ದಾರೆ.

ಇಂಥಾ ಸರ್ವೇ ಬಗ್ಗೆ ವಿಶ್ವಾಸ ಇಲ್ಲ: ಒಂದೆಡೆ ಬಿಜೆಪಿ ಸಮೀಕ್ಷೆಗಳಿಂದ ಫುಲ್ ಖಷ್ ಆಗಿದ್ರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂಥ ಸರ್ವೆಗಳ ಮೇಲೆ ನಮಗೆ ನಂಬಿಕೆಯೇ ಇಲ್ಲ ಅಂತಾ ಟ್ವೀಟ್‌ ಮಾಡಿದ್ದಾರೆ. “ಇಂಥ ಎಕ್ಸಿಟ್‌ ಪೋಲ್‌ಗಳನ್ನ ನಾನು ನಂಬುವುದಿಲ್ಲ. ಬಿಜೆಪಿ ವಿರುದ್ಧದ ಯುದ್ಧದಲ್ಲಿ ಎಲ್ಲ ವಿರೋಧ ಪಕ್ಷಗಳೂ ಒಂದಾಗಬೇಕು. ಸಹಸ್ರಾರು ಇವಿಎಂಗಳನ್ನ ಕಂಟ್ರೋಲ್ ಪಡೆಯಲು ಇಂಥ ತಯಾರಿ ನಡೆಸಲಾಗಿದೆ” ಅಂತಾ ಮಮತಾ ಬ್ಯಾನರ್ಜಿ ಟ್ವಿಟ್ಟರ್‌ನಲ್ಲಿ ಆರೋಪಿಸಿದ್ದಾರೆ.

ಸಮೀಕ್ಷೆ ಉಲ್ಟಾ ಆದ ಉದಾಹರಣೆಯೂ ಇದೆ: ಚುನಾವಣೋತ್ತರ ಸಮೀಕ್ಷೆಗಳು ನಿಖರವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಾಕಷ್ಟು ಬಾರಿ ಚುನಾವಣೋತ್ತರ ಸಮೀಕ್ಷೆ ಉಲ್ಟಾ ಆದ ಉದಾಹರಣೆಗಳೂ ಕೂಡ ಇದೆ ಎಂದು ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದಾರೆ. ರಾಷ್ಟ್ರೀಯ ಸುದ್ದಿವಾಹಿನಿಗಳು ವಿವಿಧ ಮೂಲಗಳ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸುತ್ತಿವೆ. ಪ್ರಸ್ತುತ ಬಹಿರಂಗವಾಗಿರುವ ಬಹುತೇಕ ಎಲ್ಲ ಸಮೀಕ್ಷೆಗಳಲ್ಲೂ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಮತ್ತೆ ಅಧಿಕಾರ ಹಿಡಿಯುವ ಸಾಧ್ಯತೆಗಳ ಕುರಿತು ಅಂಕಿ-ಅಂಶಗಳನ್ನು ನೀಡಿವೆ. ಆದ್ರೆ ಇದನ್ನ ನಂಬಲು ಸಾಧ್ಯವಿಲ್ಲ” ಅಂತ ಅಮರೀಂದರ್ ಸಿಂಗ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES