Monday, December 23, 2024

ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ

ನವದೆಹಲಿ: ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನದಲ್ಲಿ ಜನ ಹಕ್ಕು ಚಲಾಯಿಸುತ್ತಿದ್ದಾರೆ. ಪಂಜಾಬ್​, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ್, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಜಾರ್ಖಂಡ್, ಚಂಢೀಗಡದಲ್ಲಿ 59 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ದೇಶಾದ್ಯಂತ 10.17 ಕೋಟಿ ಜನ ಇಂದು ಮತ ಚಲಾಯಿಸಲಿದ್ದು, 918 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ಪ್ರಜಾಪ್ರಭುತ್ವದ ಹಬ್ಬಕ್ಕೆ ಇಂದು ಕೊನೆಯ ದಿನವಾಗಿದ್ದು, ಅಂತಿಮ ಹಂತದ ಮತದಾನ ಪ್ರಕ್ರಿಯೆಗೆ ದೇಶ ಅಣಿಯಾಗಿದೆ. ಲೋಕಸಭಾ ಚುನಾವಣೆಗೆ ಏಳನೇ ಹಂತದ ಮತದಾನ ನಡೆಯುತ್ತಿದ್ದು ಉತ್ತರಪ್ರದೇಶ-13, ಪಂಜಾಬ್-13, ಪಶ್ಚಿಮ ಬಂಗಾಳ-09, ಮಧ್ಯಪ್ರದೇಶ-08, ಬಿಹಾರ-08, ಹಿಮಾಚಲಪ್ರದೇಶ-04, ಜಾರ್ಖಂಡ್-03, ಚಂಡೀಗಢ್-01 ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.

RELATED ARTICLES

Related Articles

TRENDING ARTICLES