Monday, December 23, 2024

ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲೂ ಎನ್​ಡಿಎ ಜಯಭೇರಿ..!

ನವದೆಹಲಿ: 17ನೇ ಲೋಕಸಭಾ ಚುನಾವಣೆಯ ಅಂತಿಮ ಸುತ್ತಿನ ಮತದಾನ ಇಂದು ನಡೆದಿದೆ. ಬಹುನಿರೀಕ್ಷಿತ ಎಕ್ಸಿಟ್ ಪೋಲ್​ ಸಮೀಕ್ಷೆ ಪ್ರಕಟವಾಗಿದೆ. ಬಹುತೇಕ ಎಲ್ಲಾ ಸಂಸ್ಥೆಯ ಸಮೀಕ್ಷೆಗಳಲ್ಲೂ ಎನ್​ಡಿಎ ಜಯಭೇರಿ ಬಾರಿಸಿದೆ. ಯಾವ ಯಾವ ಸಂಸ್ಥೆಯ ಸಮೀಕ್ಷೆಗಳು ಯಾರಿಗೆ ಎಷ್ಟು ಸ್ಥಾನ ನೀಡಿವೆ ಎಂಬ ಮಾಹಿತಿ ಇಲ್ಲಿದೆ.

ಚಾಣಕ್ಯ ಸಮೀಕ್ಷೆಯ ಪ್ರಕಾರ ಎನ್​ಡಿಎಗೆ 340, ಕಾಂಗ್ರೆಸ್ 70, ಇತರೆ 133 ಸ್ಥಾನಗಳು ಲಭಿಸಿವೆ. ಟೈಮ್ಸ್​ ನೌ ಸಮೀಕ್ಷೆಯಲ್ಲಿ ಎನ್​ಡಿಎ 306, ಕಾಂಗ್ರೆಸ್ 132, ಇತರೆ 104 ಸ್ಥಾನ ಲಭಿಸಿದೆ. ನ್ಯೂಸ್​ ಎಕ್ಸ್​ ಸಮೀಕ್ಷೆ ಎನ್​ಡಿಎ 298, ಕಾಂಗ್ರೆಸ್ 118, ಇತರೆ 126 ಸ್ಥಾನ ಗಳಿಸಿದೆ. ಡಿಎನ್​ಎ ಸಮೀಕ್ಷೆ ಪ್ರಕಾರ ಎನ್​ಡಿಎ 287, ಕಾಂಗ್ರೆಸ್ 128, ಇತರೆ 87 ಸ್ಥಾನ ಲಭಿಸಿದೆ. ಸಿ-ವೋಟರ್​ ಸಮೀಕ್ಷೆಯಲ್ಲಿ ಎನ್​ಡಿಎ 287, ಕಾಂಗ್ರೆಸ್ 128, ಇತರೆ 87 ಸ್ಥಾನ ಲಭಿಸಿದೆ. ಜೀ ನ್ಯೂಸ್ ಸಮೀಕ್ಷೆ ಪ್ರಕಾರ ಎನ್​ಡಿಎ 300, ಕಾಂಗ್ರೆಸ್ 128, ಇತರೆ 114 ಸ್ಥಾನ ಲಭಿಸಿದೆ.

ಟುಡೇಸ್​ ಚಾಣಕ್ಯ

ಎನ್​ಡಿಎ – 340

ಯುಪಿಎ – 70

ಇತರೆ -133

ಟೈಮ್ಸ್​ ನೌ

ಎನ್​ಡಿಎ – 306

ಯುಪಿಎ – 132

ಇತರೆ – 104

ನ್ಯೂಸ್​ ಎಕ್ಸ್

ಎನ್​ಡಿಎ – 298

ಯುಪಿಎ – 118

ಇತರೆ -126

ಡಿಎನ್​ಎ

ಎನ್​ಡಿಎ – 287

ಯುಪಿಎ – 128

ಇತರೆ – 87

ಸಿ-ವೋಟರ್

ಎನ್​ಡಿಎ – 287

ಯುಪಿಎ – 128

ಇತರೆ -87

ಜೀ ನ್ಯೂಸ್

ಎನ್​ಡಿಎ – 300

ಯುಪಿಎ – 128

ಇತರೆ -114

RELATED ARTICLES

Related Articles

TRENDING ARTICLES