ಹುಬ್ಬಳ್ಳಿ: ಮೈತ್ರಿ ಪಕ್ಷಗಳಲ್ಲಿರುವ ಗೊಂದಲಗಳಿಗೆ ಸರ್ಕಾರ ವಿಸರ್ಜನೆಯೇ ಪರಿಹಾರ ಅಂತ ಜೆಡಿಎಸ್ ಹಿರಿಯ ನಾಯಕ ಬಸವರಾಜು ಹೊರಟ್ಟಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಮೂರು ಬಾರಿ ಜೆಡಿಎಸ್ ಸರ್ಕಾರ ರಚಿಸಿದೆ. ಮೈತ್ರಿಯಲ್ಲಿನ ಗೊಂದಲಗಳಿಂದಲೇ ಸರ್ಕಾರ ಪತನವಾಗಿದೆ. ಹೀಗಾಗಿ ಅನಿವಾರ್ಯವಾಗಿ ಹೊಂದಾಣಿಕೆಯಿಂದ ಸರ್ಕಾರ ನಡೆಸಬೇಕು. ಇಲ್ಲದಿಲ್ಲದೇ ಸರ್ಕಾರ ವಿಸರ್ಜಿಸಿ ಚುನಾವಣೆಗೆ ಹೋಗುವುದು ಪರಿಹಾರ. ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ” ಅಂತ ಹೇಳಿದ್ರು.
“ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಇರೋವರೆಗೂ ಸರ್ಕಾರ ಇರುತ್ತದೆ. ನಾವು ಅಧಿಕಾರದಲ್ಲಿರುವಾಗ ಬಿಜೆಪಿ ಸರ್ಕಾರದ ಮಾತು ಎಲ್ಲಿ? ಗೊಂದಲ ಮಾಡಲೆಂದೇ ಎಲ್ಲಾ ಪಕ್ಷಗಳಲ್ಲೂ ಕೆಲವರು ಇರ್ತಾರೆ. ಹೆಚ್‌ಡಿಕೆ, ಸಿದ್ದು ಫೇವರ್ ಆಗಿರಲು ಕೆಲವರು ಹೇಳಿಕೆ ನೀಡ್ತಾರೆ. ಇಂತಹ ಹೇಳಿಕೆ ನೀಡುವವರಿಗೆ ಯಾರು ಬೆಂಬಲ ನೀಡಬಾರದು. ಅಂತಹವರ ಬಾಯಿಗೆ ಬೀಗ ಹಾಕಬೇಕು. ಪದೇಪದೆ ಹೀಗೆ ಗೊಂದಲ ಸೃಷ್ಟಿಸಿದ್ರೆ ಸರ್ಕಾರ ನಡೆಸುವುದು ಕಷ್ಟ” ಎಂದಿದ್ದಾರೆ.