Saturday, December 28, 2024

‘ನಿಖಿಲ್​ ಎಲ್ಲಿದ್ದೀಯಪ್ಪಾ ಅಲ್ಲ ನಿಖಿಲ್​ ಫಾದರ್​ ಎಲ್ಲಿದ್ದೀಯಪ್ಪಾ?’

ಬೆಂಗಳೂರು: ನಿಖಿಲ್ ಎಲ್ಲಿದ್ದೀಯಪ್ಪಾ ಅಲ್ಲ, ನಿಖಿಲ್ ಫಾದರ್ ಎಲ್ಲಿದ್ದೀಯಪ್ಪಾ ಅಂತ ಜನ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಅವರಿಗೆ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಲ್ಲಿ ರಸ್ತೆ ಗುಂಡಿಗಳಿಂದ ಬೇಸತ್ತ ಜನತೆ ಕುಮಾರಸ್ವಾಮಿಯವರಿಗೆ ಪ್ರಶ್ನೆ ಮಾಡಿದ್ದಾರೆ. ಮಳೆಯಿಂದ ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದು ಜನ ಹೈರಾಣಾಗಿದ್ದಾರೆ. ಮೊದಲೇ ಹೊಂಡಗಳು ಹೆಚ್ಚಾಗಿ ಸಂಚರಿಸೋಕಾಗಲ್ಲ. ಈ ನಡುವೆ ಮಳೆ ಬಂದರೆ ವಾಹನ ಸವಾರರ, ಪಾದಾಚಾರಿಗಳ ಕಷ್ಟ ಕೇಳುವವರಿಲ್ಲ. ಎಲ್ಲಿ ಜವರಾಯ ಕಾದು ಕುಳಿತಿದ್ದಾನೆ ಅಂತ ಆತಂಕದಲ್ಲಿ ಜನ ಓಡಾಡುವಂತಿದೆ. ನಗರದಲ್ಲಿ ಸುರಿದ ಧಾರಕಾರ ಮಳೆಗೆ ರಸ್ತೆಗಳು ಕೆರೆಯಂತಾಗಿದ್ದು, ಆಲಿಕಲ್ಲು ಮಳೆಯಿಂದ ರಾಜ್ಯ ರಾಜಧಾನಿ ಜನತೆ ಹೈರಾಣಾಗಿದ್ದಾರೆ.

RELATED ARTICLES

Related Articles

TRENDING ARTICLES