Friday, May 10, 2024

ರೋಹಿತ್​, ಯುವಿ ಸಖತ್ ಸ್ಟೆಪ್​ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್..!

ಹಿಟ್ ಮ್ಯಾನ್ ಖ್ಯಾತಿಯ ಬ್ಯಾಟ್ಸ್​ಮನ್.. ಟೀಮ್ ಇಂಡಿಯಾನ ಉಪನಾಯಕ, ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ. 2011ರ ವರ್ಲ್ಡ್​ಕಪ್ ಹೀರೊ. ಸಿಕ್ಸರ್​​​ ಕಿಂಗ್​ ಯುವರಾಜ್ ಸಿಂಗ್. ತಮ್ಮ ಅದ್ಭುತ ಬ್ಯಾಟಿಂಗ್​ನಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರೋ ಸ್ಟಾರ್ ಕ್ರಿಕೆಟರ್​ಗಳು.
12ನೇ ಆವೃತ್ತಿಯ ಐಪಿಎಲ್​ನ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಹಾಗೂ ತಂಡದ ಸದಸ್ಯ ಯುವಿ ಇಬ್ಬರು ಸಖತ್ ಸ್ಟೆಪ್ ಹಾಕಿದ್ದು, ಆ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ರೋಹಿತ್, ಯುವಿ ಸ್ಟೆಪ್​ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಹೌದು, ಕೂಲ್​ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಮಣಿಸಿ 4ನೇ ಬಾರಿಗೆ ಐಪಿಎಲ್ ಕಿರೀಟವನ್ನು ಮುಡಿಗೇರಿಸಿಕೊಂಡ ಮುಂಬೈಯ ಸಂಭ್ರಮಾಚರಣೆ ಜೋರಾಗಿತ್ತು. ಟ್ರೋಫಿ ಎತ್ತಿ ಹಿಡಿದು ಮೈದಾನದಲ್ಲಿ ಸಂಭ್ರಮಿಸಿದ್ದಲ್ಲದೆ ಟೀಮ್​ ಮ್ಯಾನೇಜ್ಮೆಂಟ್ ಆಯೋಜಿಸಿದ್ದ ಪಾರ್ಟಿಯಲ್ಲೂ ಆಟಗಾರರು ಕುಣಿದು ಕುಪ್ಪಳಿಸಿದ್ರು. ಅದರಲ್ಲೂ ರೋಹಿತ್ ಶರ್ಮಾ ಮತ್ತು ಯುವರಾಜ್ ಸಿಂಗ್ ಅವರ ರ್ಯಾಪ್, ಡ್ಯಾನ್ಸ್​​​​ ಸಖತ್ ಆಗಿತ್ತು. ಅದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

RELATED ARTICLES

Related Articles

TRENDING ARTICLES