ಹಿಟ್ ಮ್ಯಾನ್ ಖ್ಯಾತಿಯ ಬ್ಯಾಟ್ಸ್ಮನ್.. ಟೀಮ್ ಇಂಡಿಯಾನ ಉಪನಾಯಕ, ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ. 2011ರ ವರ್ಲ್ಡ್ಕಪ್ ಹೀರೊ. ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್. ತಮ್ಮ ಅದ್ಭುತ ಬ್ಯಾಟಿಂಗ್ನಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರೋ ಸ್ಟಾರ್ ಕ್ರಿಕೆಟರ್ಗಳು.
12ನೇ ಆವೃತ್ತಿಯ ಐಪಿಎಲ್ನ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಹಾಗೂ ತಂಡದ ಸದಸ್ಯ ಯುವಿ ಇಬ್ಬರು ಸಖತ್ ಸ್ಟೆಪ್ ಹಾಕಿದ್ದು, ಆ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ರೋಹಿತ್, ಯುವಿ ಸ್ಟೆಪ್ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಹೌದು, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಮಣಿಸಿ 4ನೇ ಬಾರಿಗೆ ಐಪಿಎಲ್ ಕಿರೀಟವನ್ನು ಮುಡಿಗೇರಿಸಿಕೊಂಡ ಮುಂಬೈಯ ಸಂಭ್ರಮಾಚರಣೆ ಜೋರಾಗಿತ್ತು. ಟ್ರೋಫಿ ಎತ್ತಿ ಹಿಡಿದು ಮೈದಾನದಲ್ಲಿ ಸಂಭ್ರಮಿಸಿದ್ದಲ್ಲದೆ ಟೀಮ್ ಮ್ಯಾನೇಜ್ಮೆಂಟ್ ಆಯೋಜಿಸಿದ್ದ ಪಾರ್ಟಿಯಲ್ಲೂ ಆಟಗಾರರು ಕುಣಿದು ಕುಪ್ಪಳಿಸಿದ್ರು. ಅದರಲ್ಲೂ ರೋಹಿತ್ ಶರ್ಮಾ ಮತ್ತು ಯುವರಾಜ್ ಸಿಂಗ್ ಅವರ ರ್ಯಾಪ್, ಡ್ಯಾನ್ಸ್ ಸಖತ್ ಆಗಿತ್ತು. ಅದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ರೋಹಿತ್, ಯುವಿ ಸಖತ್ ಸ್ಟೆಪ್ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್..!
TRENDING ARTICLES