ಮಂಡ್ಯ: “ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರು ತಟಸ್ಥವಾಗಿರಲು ಸಿಎಂ ಕಾರಣ. ನಿಖಿಲ್ ಪರ ಕಾಂಗ್ರೆಸ್ಸಿಗರು ಪ್ರಚಾರ ಮಾಡದಿರಲು ಸಿಎಂ ನೇರ ಹೊಣೆ ಅಂತ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆ. ಆರ್. ಪೇಟೆಯಲ್ಲಿ ಮಾತನಾಡಿದ ಅವರು, “ನಿಖಿಲ್ ಮತ್ತು ಕುಮಾರಸ್ವಾಮಿ ಪ್ರಚಾರಕ್ಕೆ ನಮ್ಮನ್ನು ಕರೆಯಬೇಕಿತ್ತು. ಆಗ ನಾವೂ ನಿಖಿಲ್ ಪರ ಮತಯಾಚನೆ ಮಾಡುತ್ತಿದ್ವಿ. ಸ್ವಾಭಿಮಾನ ಬಿಟ್ಟು ಯಾರೂ ಕೆಲಸ ಮಾಡಲ್ಲ. ಎಲ್ಲೆಡೆ ಕಾಂಗ್ರೆಸ್ ಮುಖಂಡರ ಸಹಾಯ ಕೇಳಿದ್ದ ಸಿಎಂ ಮಂಡ್ಯದಲ್ಲಿ ಮಾತ್ರ ಕೇಳಿಲ್ಲ. ಮಂಡ್ಯದಲ್ಲಿ ಕೇಳಲು ಏನಾಗಿತ್ತು.. ? ಚುನಾವಣೆ ವೇಳೆ ನಮ್ಮನ್ನು ಗೌರವದಿಂದ ಕಾಣಲಿಲ್ಲ ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ಬೇಕು ಅನ್ನೋರಲ್ಲಿ ನಾನೂ ಒಬ್ಬ. ಸಿದ್ದರಾಮಯ್ಯ ಕೊಟ್ಟ ಎಲ್ಲ ಭರವಸೆಗಳನ್ನೂ ಈಡೇರಿಸಿದ್ರು. ಒಂದೇ ಒಂದು ಹಗರಣಕ್ಕೆ ಸಿಲುಕದೇ ಆಡಳಿತ ನಡೆಸಿದ್ದರು. ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗ್ಬೇಕು ಅಂತ ಕೆ.ಬಿ. ಚಂದ್ರಶೇಖರ್ ಹೇಳಿದ್ದಾರೆ.