ಬೆಂಗಳೂರು : ಮಾಜಿ ಮುಖ್ಯಮಂತ್ರಿ, ಸಿಎಲ್ಪಿ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅವರು ನೀಡಿರುವ ಹೇಳಿಕೆಯನ್ನು ಜೆಡಿಎಸ್ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ಹಾದಿ ಬೀದಿಯಲ್ಲಿ ಕಾಂಗ್ರೆಸ್ ಮುಖಂಡರು ಮಾತನಾಡುವುದು ಸರಿಯಿಲ್ಲ. ಮೈತ್ರಿಯಲ್ಲಿ ಕಷ್ಟ ಆಗಿದ್ರೆ ಅವರ ದಾರಿ ಅವರು ನೋಡಿಕೊಳ್ಳಬಹುದು’ ಅಂತ ಹೇಳಿದ್ದಾರೆ.
ಮೈತ್ರಿ ನಾಯಕರ ವಾಕ್ಸಮರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಕುಪೇಂದ್ರ ರೆಡ್ಡಿ ಅವರು ಕೂಡ ಇದೀಗ ಅತೃಪ್ತ ಕೈ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಮೈತ್ರಿಯಲ್ಲಿ ಕಷ್ಟ ಆಗಿದ್ರೆ ಅವ್ರ ದಾರಿ ಅವ್ರು ನೋಡಿಕೊಳ್ಳಲಿ : ಕುಪೇಂದ್ರ ರೆಡ್ಡಿ
TRENDING ARTICLES