ದೋಸ್ತಿ ಮುನಿಸು ತಾರಕಕ್ಕೆ ಏರುತ್ತಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅವರ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ತಿರುಗೇಟು ನೀಡಿದ್ರು. ಇದೀಗ ಸಿದ್ದರಾಮಯ್ಯ ಅವರ ಟ್ವೀಟ್ಗೆ ವಿಶ್ವನಾಥ್ ಟ್ವೀಟ್ ಮೂಲಕ ಮತ್ತೆ ತಿರುಗೇಟು ನೀಡಿದ್ದಾರೆ.
”ನನ್ನ ಹೇಳಿಕೆ ಬಹಳ ಜವಬ್ದಾರಿಯುತವಾಗಿದೆ. ಕಿಡಿಗೇಡಿತನ, ಸುಳ್ಳು ಹೇಳುವುದು ನನ್ನ ರಕ್ತದಲ್ಲಿಯೇ ಬಂದಿಲ್ಲ. ನಾನೇ ಮುಖ್ಯಮಂತ್ರಿ ಅನ್ನೋ ವಿಷಯ ಮೈತ್ರಿ ಧರ್ಮಕ್ಕೆ ಧಕ್ಕೆ. ಈ ವಿಷಯ ಪ್ರಸ್ತಾವನೆ ಸಿದ್ದರಾಮಯ್ಯನವರಿಂದಲೇ ಆಗಿದ್ದು. ಸಮನ್ವಯ ಸಮಿತಿಗೆ ನನ್ನನ್ನು ಆಹ್ವಾನಿಸಿ ಬಂದು ಉತ್ತರಿಸುತ್ತೇನೆ. ನಿಮಗೆ ನಮ್ಮ ಕುಲದೈವ ಬೀರೇಶ್ವರ ಒಳ್ಳೆಯ ಬುದ್ದಿ ಕೊಡಲಿ” ಅಂತ ಸಿದ್ದರಾಮಯ್ಯ ಅವರ ವಿರುದ್ಧ ಗುಡುಗಿದ್ದಾರೆ.
ಸಮನ್ವಯ ಸಮಿತಿಗೆ ಆಹ್ವಾನಿಸಿ, ಅಲ್ಲಿ ಉತ್ತರಿಸ್ತೀನಿ : ಸಿದ್ದು ಟ್ವೀಟ್ ಬಾಣಕ್ಕೆ ವಿಶ್ವನಾಥ್ ತಿರುಗೇಟು
TRENDING ARTICLES